ದೆಹಲಿಯಲ್ಲಿ ಪೆಟ್ರೋಲ್‌ಗಿಂತ ಡೀಸೆಲ್ ಬೆಲೆಯೇ ಹೆಚ್ಚಾಗಿದ್ದು, ಈ ವಿಚಾರವನ್ನು ನೆಟ್ಟಿಗರು ಬಹಳ ಫನ್ನಿಯಾಗಿ ಮೆಮೆಗಳ ಮೂಲಕ ಹಂಚಿಕೊಂಡಿದ್ದಾರೆ. ಸತತ 18ನೇ ದಿನ ಬೆಲೆಯಲ್ಲಿ ಏರಿಕೆ ಕಂಡ ಡೀಸೆಲ್ ದರವು ಬುಧವಾರದಂದು 48ಪೈ/ಲೀನಷ್ಟು ಹೆಚ್ಚಳವಾಗಿದೆ.
ರಾಜಧಾನಿ ದೆಹಲಿಯಲ್ಲಿ ಡೀಸೆಲ್ ಬೆಲೆಯು 79.88 ರೂ./ಲೀ ಇದ್ದರೆ, ಪೆಟ್ರೋಲ್ ದರವು 79.76 ರೂ./ಲೀ ನಷ್ಟಿದೆ. ಮೇ ತಿಂಗಳಲ್ಲಿ ದೆಹಲಿ ಸರ್ಕಾರ, ಡೀಸೆಲ್ ಮೇಲಿನ ಮಾರಾಟ ಹಾಗೂ ವ್ಯಾಟ್ ತೆರಿಗೆಗಳಲ್ಲಿ ಏರಿಕೆ ಮಾಡಿದ ಬಳಿಕ ಡೀಸೆಲ್ ಪೆಟ್ರೋಲ್ ಗಿಂತ ಜಾಸ್ತಿ ಇದೆ.
ಕಳೆದ 18 ದಿನಗಳಲ್ಲಿ ಡೀಸೆಲ್ ಬೆಲೆಯಲ್ಲಿ 10.49ರೂ./ಲೀ ಅಷ್ಟು ಏರಿಕೆಯಾಗಿದೆ. ಇದೇ ವೇಳೆ, ಪೆಟ್ರೋಲ್ ದರವು 8.5ರೂ./ಲೀ ನಷ್ಟು ಹೆಚ್ಚಳವಾಗಿದೆ.
https://twitter.com/iStormbreaker_/status/1275682845835608068?ref_src=twsrc%5Etfw%7Ctwcamp%5Etweetembed%7Ctwterm%5E1275682845835608068%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Faur-ye-main-aasmaan-ki-unchaaiyon-mein-netizens-share-memes-as-diesel-gets-costlier-than-petrol-in-delhi%2F611280