alex Certify ಸ್ಮಾರ್ಟ್ಫೋನ್ ಖರೀದಿದಾರರಿಗೆ ಸಿಕ್ಕಿದೆ ಖುಷಿ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಮಾರ್ಟ್ಫೋನ್ ಖರೀದಿದಾರರಿಗೆ ಸಿಕ್ಕಿದೆ ಖುಷಿ ಸುದ್ದಿ

ಕೊರೊನಾ ವೈರಸ್ ಹಿನ್ನಲೆಯಲ್ಲಿ ದೇಶದಲ್ಲಿ ಮೇ 3ರವರೆಗೆ ಲಾಕ್ ಡೌನ್ ಜಾರಿಯಲ್ಲಿದೆ. ಆದ್ರೆ ಏಪ್ರಿಲ್ 20ರ ನಂತ್ರ ಕೆಲವೊಂದು ರಿಯಾಯಿತಿ ನೀಡಲಾಗಿದೆ. ಮೊಬೈಲ್ ಖರೀದಿ ಆಸೆಯಲ್ಲಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಏಪ್ರಿಲ್ 20ರ ನಂತ್ರ ಮೊಬೈಲ್ ಖರೀದಿಗೆ ಅವಕಾಶ ಸಿಗಲಿದೆ.

ಇ ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ಸ್ಮಾರ್ಟ್ಫೋನ್ ಗಳ ಆರ್ಡರ್ ತೆಗೆದುಕೊಳ್ಳಲು ಶುರು ಮಾಡಿದೆ. ಪಶ್ಚಿಮ ಬಂಗಾಳ ಮತ್ತು ಕರ್ನಾಟಕವನ್ನು ಹೊರತುಪಡಿಸಿ ದೇಶದ ಉಳಿದ ಭಾಗಗಳಲ್ಲಿ ಆರ್ಡರ್ ತೆಗೆದುಕೊಳ್ಳಲಾಗ್ತಿದೆ ಎಂದು ಫ್ಲಿಪ್ಕಾರ್ಟ್ ಹೇಳಿದೆ. ಶಿಯೋಮಿ, ಆಸುಸ್, ಮೋಟೋ ರೇಜರ್, ಪೊಕೊ ಎಕ್ಸ್ 2, ಇನ್ಫಿನಿಕ್ಸ್ ಮತ್ತು ಐಕ್ಯೂಒ 3 ಸೇರಿದಂತೆ ಅನೇಕ ಸ್ಮಾರ್ಟ್ಫೋನ್ ಗಳು ಮಾರಾಟಕ್ಕಿವೆ.

ಮೊಬೈಲ್ ಆರ್ಡರ್ ಮಾಡಿದವರಿಗೆ ನಾಳೆಯಿಂದ ಮೊಬೈಲ್ ವಿತರಣೆ ಶುರು ಮಾಡುವುದಾಗಿ ಕಂಪನಿ ಹೇಳಿದೆ. ದೆಹಲಿಯಲ್ಲಿ ಸ್ಮಾರ್ಟ್ಫೋನ್ ವಿತರಣೆ ಸಮಯ 10-12 ದಿನ ತೆಗೆದುಕೊಳ್ಳಲಿದೆ. ಸ್ಮಾರ್ಟ್ಫೋನ್ ಗೆ ಕೆಲವೊಂದು ರಿಯಾಯಿತಿ ನೀಡುವುದಾಗಿ ಕಂಪನಿ ಘೋಷಣೆ ಮಾಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...