HomeKarnatakaರೈತರೇ ಗಮನಿಸಿ : ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಅರ್ಜಿ ಆಹ್ವಾನ

ರೈತರೇ ಗಮನಿಸಿ : ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಅರ್ಜಿ ಆಹ್ವಾನ

ಕೃಷಿ  ಇಲಾಖೆಯಿಂದ 2023-24ನೇ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ತುಂತುರು ನೀರಾವರಿ ಘಟಕಗಳನ್ನು ಅಳವಡಿಸಲು ಬಯಸುವ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ರೈತರು ಆಧಾರ್ ಕಾರ್ಡ್, ನೀರಾವರಿ ಪ್ರಮಾಣ ಪತ್ರ, ಪಹಣಿ, ಪ.ಜಾ ಮತ್ತು ಪ.ಪಂ ಇದ್ದಲ್ಲಿ (ಪ್ರಮಾಣ ಪತ್ರ), ರೂ.20/- ಛಾಪಾ ಕಾಗದ (ನೋಟರಿಯೊಂದಿಗೆ), ಬ್ಯಾಂಕ್  ಪಾಸ್‌ಬುಕ್, ಆರ್.ಟಿ.ಜಿ.ಎಸ್. ಪತ್ರಗಳೊಂದಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಯೋಜನೆಯ ಸದಪಯೋಗ ಪಡೆದುಕೊಳ್ಳಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯೋಜನೆಯ  ಲಾಭ ಪಡೆಯಲು ರೈತರು ಕಡ್ಡಾಯವಾಗಿ ಫ್ರೂಟ್ಸ್ ಐಡಿ ಯನ್ನು ಹೊಂದಿರಬೇಕು. ಆದ ಕಾರಣ ರೈತರು ಈಗಾಗಲೇ ಫ್ರೂಟ್ಸ್ ಐಡಿ ಯನ್ನು ಹೊಂದಿದ್ದಲ್ಲಿ ಅಥವಾ ಹೊಂದಿರದೆ ಇದ್ದಲ್ಲಿ ತಮ್ಮ ಎಲ್ಲಾ ಪಹಣಿಗಳನ್ನು ಫ್ರೂಟ್ಸ್ ಐಡಿಗೆ ಜೋಡಣೆ ಮಾಡಿಕೊಳ್ಳಬೇಕು ಎಂದು  ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular