HomeLatest NewsESI ಆಸ್ಪತ್ರೆಯಲ್ಲಿ ನರ್ಸಿಂಗ್ ಕೆಲಸ ಕೊಡಿಸುವುದಾಗಿ ಆಮಿಷ: ಲಕ್ಷ ಲಕ್ಷ ಹಣ ಪಡೆದು ಯುವಕ-ಯುವತಿಯರಿಗೆ ವಂಚನೆ

ESI ಆಸ್ಪತ್ರೆಯಲ್ಲಿ ನರ್ಸಿಂಗ್ ಕೆಲಸ ಕೊಡಿಸುವುದಾಗಿ ಆಮಿಷ: ಲಕ್ಷ ಲಕ್ಷ ಹಣ ಪಡೆದು ಯುವಕ-ಯುವತಿಯರಿಗೆ ವಂಚನೆ

ಕಲಬುರಗಿ: ಸರ್ಕಾರಿ ಕೆಲಸ‌ದ ಆಮಿಷವೊಡ್ಡಿ ವ್ಯಕ್ತಿಯೊಬ್ಬ ಯುವಕ-ಯುವತಿಯರಿಂದ ಲಕ್ಷ ಲಕ್ಷ ಹಣ ಪಡೆದು ವಂಚಿಸಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

ಕಲಬುರಗಿ ಇಎಸ್ ಐ ಆಸ್ಪತ್ರೆಯಲ್ಲಿ ನರ್ಸಿಂಗ್ ಕೆಲಸ ಕೊಡಿಸುತ್ತನೆಂದು ನಂಬಿಸಿದ ಆಸಾಮಿ, ನಿರುದ್ಯೋಗಿ ಯುವಕ-ಯುವತಿಯರಿಂದ ಹಣ ಪಡೆದಿದ್ದಾನೆ. ಕೆಲಸ ಸಿಗುತ್ತದೆ, ಅದೂ ಸರ್ಕಾರಿ ಕೆಲಸ ಎಂದು ನಂಬಿ ಆಕಾಂಕ್ಷಿಗಳು ಸಾಲ ಮಾಡಿ ಕಷ್ಟ ಪಟ್ಟು ಹಣ ನೀಡಿದ್ದಾರೆ. ಆದರೆ ಅತ್ತ ಕೆಲಸವೂ ಇಲ್ಲ, ಕೊತ್ಟ ಹಣವೂ ವಾಪಸ್ ಸಿಗದೇ ಮೋಸ ಹೋದಾಗಲೇ ವ್ಯಕ್ತಿಯ ವಂಚನೆ ಬಯಲಾಗಿದೆ.

ಹೈದರಾಬಾದ್ ಮೂಲದ ಪ್ರದೀಪ್ ಕೆಲಸದ ಆಮಿಷವೊಡ್ದಿ ವಂಚಿಸಿರುವ ಆರೋಪಿ. ಹೈದರಾಬಾದ್ ಮೂಲದ ಖಾಸಗಿ ಕಂಪನಿಯೊಂದರ ಪ್ರದೀಪ್, ರಾಜ್ಯದ ಅತೀ ದೊಡ್ಡ ಮೆಡಿಕಲ್ ಕಾಲೇಜು ಕಂ ಆಸ್ಪತ್ರೆಯಾಗಿರುವ ಇಎಸ್​​ಐ ಆಸ್ಪತ್ರೆಯಲ್ಲಿ ನರ್ಸ್ ಕೆಲಸ ಕೊಡಿಸುತ್ತೆನೆಂದು ಹತ್ತಾರು ಯುವಕರನ್ನ ನಂಬಿಸಿ ಹಣ ವಸೂಲಿ ಮಾಡಿದ್ದ. ಅಷ್ಟೇ ಅಲ್ಲದೆ ಈಗಾಗಲೇ ಹಲವರಿಗೆ ಕೆಲಸ ಕೊಡಿಸಿದ್ದಾಗಿ ಹೇಳಿ ನಂಬಿಸಿದ್ದ. ಹೀಗಾಗಿ ಆತನ ಮಾತು ಕೇಳಿದವರು ತಮಗೂ ಕೆಲಸ ಸಿಗುತ್ತೆ ಎಂದು ನಂಬಿಕೊಂಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆತ ಹೇಳಿದಂತೆ ಒಂದೊಂದು ಹುದ್ದೆಗೆ ಒಬ್ಬೊರಿಂದ 2 ಲಕ್ಷದಿಂದ 4 ಲಕ್ಷ ರೂಪಾಯಿವರಿಗೂ ಹಣ ನೀಡಿದ್ದಾರೆ. ಸುಮಾರು 10ಕ್ಕೂ ಹೆಚ್ಚು ಜನರ ಬಳಿ ಹಣ ವಸೂಲಿ ಮಾಡಿ ವರ್ಷವೇ ಕಳೆದರು ಕೂಡ ಕೆಲಸ ಸಿಕ್ಕಿಲ್ಲ. ಕೇಳಿದರೆ ಇನ್ನು ಸ್ವಲ್ಪ ದಿನ ಕಾಯುವಂತೆ ಹೇಳುತ್ತಿದ್ದಾನೆ. ಇದರಿಂದ ಆಕ್ರೋಶಗೊಂಡ ಜನರು ಆತನನ್ನ ರೆಡ್ ಹ್ಯಾಂಡ್ ಆಗಿ ಹಿಡಿಯಲು ಬಂದಾಗ ಎಸ್ಕೇಪ್ ಆಗಿದ್ದಾನೆ.

ಇನ್ನು ಆರೋಪಿ ಪ್ರದೀಪ್​​ ಜೊತೆ ಇಎಸ್​ಐ ಆಸ್ಪತ್ರೆಯ ಆಡಳಿತ‌ ಮಂಡಳಿ ಕೂಡ ಶಾಮೀಲಾಗಿರುವ ಅನುಮಾನ ವ್ಯಕ್ತವಾಗಿದೆ. ಕಾರಣ ಪ್ರತಿನಿತ್ಯ ಈತ ಕೆಲವರಿಗೆ ಆಮಿಷವೊಡ್ಡಿ ಇಎಸ್​​ಐ ಆಸ್ಪತ್ರೆಯ ಮುಂಭಾಗ ಪರೀಕ್ಷೆ ಬರೆಯಿಸಿ, ಹಣಕಾಸಿನ ವ್ಯವಹಾರ ಕೂಡ ನಡೆಸಿದ್ದನಂತೆ. ಈತನಿಂದ ವಂಚನೆಗೊಳಗಾದ ಉದ್ಯೋಗಾಕಾಂಕ್ಷಿಗಳು ಪೊಲೀಸ್ ಠಾಣೆ ಮೆಟ್ಟಿಲೇರಲು ಮುಂದಾಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular