HomeLatest Newsವಿಮಾನದೊಳಗೆ ವೇಪಿಂಗ್ ಮಾಡಿ ಸಿಕ್ಕಿಬಿದ್ದ ಚಹಲ್; ಕಿರಿಯ ಕ್ರಿಕೆಟಿಗರಿಗೆ ಸ್ಪೂರ್ತಿಯಾಗಲು ಎಲ್ಲವನ್ನೂ ಬಿಟ್ಟಿದ್ದೇನೆ ಎಂಬ ಬಿಲ್ಡಪ್...

ವಿಮಾನದೊಳಗೆ ವೇಪಿಂಗ್ ಮಾಡಿ ಸಿಕ್ಕಿಬಿದ್ದ ಚಹಲ್; ಕಿರಿಯ ಕ್ರಿಕೆಟಿಗರಿಗೆ ಸ್ಪೂರ್ತಿಯಾಗಲು ಎಲ್ಲವನ್ನೂ ಬಿಟ್ಟಿದ್ದೇನೆ ಎಂಬ ಬಿಲ್ಡಪ್ ಬೇರೆ!

ಇತ್ತೀಚೆಗಷ್ಟೆ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಡ್ರೆಸಿಂಗ್ ರೂಮ್‌ನಲ್ಲಿ ವೇಪಿಂಗ್ ಮಾಡಿ ಸಿಕ್ಕಿಬಿದ್ದು, ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದರು. ಬಿಸಿಸಿಐ ದಂಡವನ್ನೂ ಸಹ ವಿಧಿಸಿತ್ತು.

ಇದೀಗ ಪಂಜಾಬ್ ಕಿಂಗ್ಸ್ ತಂಡದ ಆಟಗಾರ ಯುಜ್ವೇಂದ್ರ ಚಹಲ್ ಅದೇ ರೀತಿ ವಿಮಾನದೊಳಗೆ ವೇಪಿಂಗ್ ಮಾಡಿ ಸಿಕ್ಕಿಬಿದ್ದಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಾಗೂ ವಿಡಿಯೊಗಳು ಹರಿದಾಡಿವೆ.

ಇದರಲ್ಲಿ ಚಹಲ್ ಪಂಜಾಬ್ ಕಿಂಗ್ಸ್ ತಂಡದ ಸಹ ಆಟಗಾರರ ಜತೆಗೆ ಮಾತನಾಡುತ್ತಾ ಇ – ಸಿಗರೇಟ್ ಸೇದುತ್ತಿದ್ದು, ನೆಟ್ಟಿಗರು ಚಹಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಬರೆದುಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಇದೇ ಚಹಲ್ ಈ ಬಾರಿಯ ಐಪಿಎಲ್ ಶುರುವಾಗುವ ಮುನ್ನ ಮಾತನಾಡಿ ಓರ್ವ ಹಿರಿಯ ಕ್ರಿಕೆಟಿಗನಾಗಿ ತಾನು ಕಿರಿಯ ಕ್ರಿಕೆಟಿಗರಿಗೆ ಮಾದರಿಯಾಗಬೇಕು, ಹೀಗಾಗಿ ತಾನು ಆರು ತಿಂಗಳ ಹಿಂದೆಯೇ ಮದ್ಯಪಾನ ಹಾಗೂ ಧೂಮಪಾನ ಬಿಟ್ಟಿದ್ದೇನೆ ಎಂದು ಹೇಳಿಕೊಂಡಿದ್ದರು.

ಆದರೆ ಇದೀಗ ಚಹಲ್ ವೇಪಿಂಗ್ ಮಾಡಿ ತಾವು ಕೊಟ್ಟಿದ್ದ ಬಿಲ್ಡಪ್ ನೈಜವಲ್ಲ ಎಂಬುದನ್ನು ತಿಳಿಸಿದ್ದಾರೆ. ಇಷ್ಟೇ ಅಲ್ಲದೇ ಕಳೆದ ಕೆಲ ದಿನಗಳ ಹಿಂದೆ ಚಹಲ್ ತಮ್ಮ ಐಷಾರಾಮಿ ಕಾರನ್ನು ಚಲಾಯಿಸುತ್ತಾ ಸಿಗರೇಟ್ ಸೇದಿ ಕೆಂಡದ ಸಮೇತ ಅದನ್ನು ನಡು ರಸ್ತೆಯಲ್ಲಿ ಎಸೆದು ವೇಗವಾಗಿ ಕಾರು ಚಲಾಯಿಸಿಕೊಂಡು ತೆರಳಿದ್ದರು. ಈ ವಿಡಿಯೊವನ್ನು ವ್ಯಕ್ತಿಯೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಹೀಗೆ ಚಹಲ್ ತಮ್ಮ ಚಟದಿಂದಾಗಿ ಪದೇ ಪದೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular