ದುನಿಯಾ ಡಿಜಿಟಲ್ ಡೆಸ್ಕ್ : ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಬಯಸುವ ಯುವಕರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಇಂಡಿಯನ್ ಆರ್ಮಿಯು ತನ್ನ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ‘ಸಿವಿಲಿಯನ್ ಸ್ವಿಚ್ ಬೋರ್ಡ್ ಆಪರೇಟರ್’ (CSBO) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.
ಕೇವಲ 10ನೇ ತರಗತಿ ಪಾಸಾದ ಅಭ್ಯರ್ಥಿಗಳು ಈ ಗೌರವಾನ್ವಿತ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಯಾವುದೇ ದೈಹಿಕ ಪರೀಕ್ಷೆಯ ಕಠಿಣ ಸವಾಲುಗಳಿಲ್ಲದೆ ಕೇವಲ ಲಿಖಿತ ಮತ್ತು ಪ್ರಾಯೋಗಿಕ ಪರೀಕ್ಷೆಯ ಮೂಲಕ ಆಯ್ಕೆಯಾಗುವ ಅವಕಾಶ ಇಲ್ಲಿದೆ. ಆಸಕ್ತರು ಮೇ 31ರ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಒಟ್ಟು 190 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.
ಇಂಡಿಯನ್ ಆರ್ಮಿಯು ತನ್ನ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ‘ಸಿವಿಲಿಯನ್ ಸ್ವಿಚ್ ಬೋರ್ಡ್ ಆಪರೇಟರ್’ (CSBO) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಕೇವಲ 10ನೇ ತರಗತಿ ಪಾಸಾದ ಅಭ್ಯರ್ಥಿಗಳು ಈ ಗೌರವಾನ್ವಿತ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಯಾವುದೇ ದೈಹಿಕ ಪರೀಕ್ಷೆಯ ಕಠಿಣ ಸವಾಲುಗಳಿಲ್ಲದೆ ಕೇವಲ ಲಿಖಿತ ಮತ್ತು ಪ್ರಾಯೋಗಿಕ ಪರೀಕ್ಷೆಯ ಮೂಲಕ ಆಯ್ಕೆಯಾಗುವ ಅವಕಾಶ ಇಲ್ಲಿದೆ. ಆಸಕ್ತರು ಮೇ 31ರ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಒಟ್ಟು 190 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.
- ಹುದ್ದೆಯ ಹೆಸರು: ಸಿವಿಲಿಯನ್ ಸ್ವಿಚ್ ಬೋರ್ಡ್ ಆಪರೇಟರ್ (CSBO) ಗ್ರೇಡ್-II, ಗ್ರೂಪ್-ಸಿ.
- ಒಟ್ಟು ಖಾಲಿ ಹುದ್ದೆಗಳು: 190 (PWBD 12, ಮಾಜಿ ಸೈನಿಕರಿಗೆ 20 ಹುದ್ದೆಗಳು ಸೇರಿ).
- ಅರ್ಹತೆ: ಮಾನ್ಯತೆ ಪಡೆದ ಮಂಡಳಿಯಿಂದ ಮೆಟ್ರಿಕ್ಯುಲೇಷನ್ (10ನೇ ತರಗತಿ) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಪ್ರೈವೇಟ್ ಬೋರ್ಡ್ ಎಕ್ಸ್‌ಚೇಂಜ್ (PBX) ಬೋರ್ಡ್ ನಿರ್ವಹಣೆಯಲ್ಲಿ ನೈಪುಣ್ಯತೆಯೊಂದಿಗೆ ಕನಿಷ್ಠ 6 ತಿಂಗಳ ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು. ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವ ಸಾಮರ್ಥ್ಯವಿರಬೇಕು.
- ವಯೋಮಿತಿ: 18 ರಿಂದ 25 ವರ್ಷಗಳ ನಡುವೆ ಇರಬೇಕು. ಸರ್ಕಾರದ ನಿಯಮಗಳ ಪ್ರಕಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
- ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಮೂಲಕ.
- ಅರ್ಜಿ ಸಲ್ಲಿಕೆ ಪ್ರಾರಂಭ: ಮೇ 2.
- ಕೊನೆಯ ದಿನಾಂಕ: ಮೇ 31.
- ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ (Practical Test) ಮತ್ತು ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
- ಹೆಚ್ಚಿನ ಮಾಹಿತಿಗಾಗಿ: ಅಧಿಕೃತ ವೆಬ್‌ಸೈಟ್ joinindianarmy.nic.in ಗೆ ಭೇಟಿ ನೀಡಿ.
ಪರೀಕ್ಷಾ ವಿಧಾನ (Exam Pattern): ಲಿಖಿತ ಪರೀಕ್ಷೆಯು ಬಹು ಆಯ್ಕೆಯ ಪ್ರಶ್ನೆಗಳನ್ನು (MCQs) ಒಳಗೊಂಡಿರುತ್ತದೆ. ಒಟ್ಟು 100 ಅಂಕಗಳಿಗೆ ಪರೀಕ್ಷೆ ನಡೆಯಲಿದ್ದು, ಅದರ ವಿವರಗಳು ಹೀಗಿವೆ:
- ಭಾಗ-I: ಜನರಲ್ ಇಂಟೆಲಿಜೆನ್ಸ್ ಮತ್ತು ನ್ಯೂಮರಿಕಲ್ ಆಪ್ಟಿಟ್ಯೂಡ್ (25 ಪ್ರಶ್ನೆಗಳು – 25 ಅಂಕಗಳು).
- ಭಾಗ-II: ಜನರಲ್ ಅವೇರ್ನೆಸ್ (25 ಪ್ರಶ್ನೆಗಳು – 25 ಅಂಕಗಳು).
- ಭಾಗ-III: ಜನರಲ್ ಇಂಗ್ಲಿಷ್ (25 ಪ್ರಶ್ನೆಗಳು – 25 ಅಂಕಗಳು).
- ಭಾಗ-IV: ಲಾಜಿಕ್ ರೀಸನಿಂಗ್ (25 ಪ್ರಶ್ನೆಗಳು – 25 ಅಂಕಗಳು).

