alex Certify ಕನ್ನಡದಲ್ಲಿ ಮೊಟ್ಟ ಮೊದಲ ಬಾರಿ ರೆಡಿಯಾಗ್ತಿದೆ ಝೋಂಬಿ ಸಿನಿಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕನ್ನಡದಲ್ಲಿ ಮೊಟ್ಟ ಮೊದಲ ಬಾರಿ ರೆಡಿಯಾಗ್ತಿದೆ ಝೋಂಬಿ ಸಿನಿಮಾ

ಕನ್ನಡ ಸಿನಿಮಾ ಚಿತ್ರ ರಂಗದಲ್ಲಿ ಹೊಸ ಪ್ರಯೋಗವಾಗ್ತಿದೆ. ಝೋಂಬಿ ಕಾನ್ ಸೆಪ್ಟ್ ನ ಸಿನಿಮಾ ತೆರೆಗೆ ಬರ್ತಿದೆ. ಭಾರತದ ನಾನಾ ಭಾಷೆಗಳಲ್ಲಿ ಈ ಕಾನ್ ಸೆಪ್ಟ್ ನ ಸಿನಿಮಾಗಳು ತೆರೆಗೆ ಬಂದಿವೆ. ಆದ್ರೀಗ ಮೊಟ್ಟ ಮೊದಲ ಬಾರಿಗೆ ಕನ್ನಡ ಸಿನಿಮಾರಂಗದ ಇತಿಹಾಸದಲ್ಲೇ  ಝೋಂಬಿ ಸಿನಿಮಾ ತಯಾರಾಗ್ತಿದೆ.

ಮೊದಲ ಸೂಪರ್ ವುಮೆನ್ ಸಿನಿಮಾ ಆನಾ ಟೀಮ್ ಈ ಸಿನಿಮಾ ರೆಡಿ ಮಾಡ್ತಿದೆ. ಆನಾ ನಿರ್ದೇಶಕ ಮನೋಜ್ ಪಿ ನಡಲುಮನೆಯವರು ಈ ಸಿನಿಮಾಕ್ಕೆ ಕಥೆ ಬರೆದಿದ್ರೆ, ಆನಾದಲ್ಲಿ ಈಗಾಗಲೇ ಕೆಲಸ ಮಾಡಿರುವ ಆನಂದ್ ರಾಜ್ ಈ ಚಿತ್ರಕ್ಕೆ  ಆಕ್ಷನ್ ಕಟ್ ಹೇಳ್ತಿದ್ದಾರೆ. ಸದ್ಯ ಎಲ್ಲರ ಬಾಯಲ್ಲೂ ಈ ಸಿನಿಮಾ ಓಡಾಡ್ತಿದೆ. ಸೂಪರ್ ನ್ಯಾಚುರಲ್, ಥ್ರಿಲ್ಲಿಂಗ್ ಎನಿಸುವ ಟೀಸರ್ ರಿಲೀಸ್ ಆಗಿ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದ್ದು, ಹೊಸಬರ ತಂಡದ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗ್ತಿದೆ.

ಅದ್ಧೂರಿಯಾಗಿ ಸಿನಿಮಾ ಮೂಡಿಬರಲಿದ್ದು, ಅಧಿಕೃತವಾಗಿ ನಿರ್ಮಾಪಕರ ಹೆಸರು ಈವರೆಗೂ ಬಹಿರಂಗವಾಗಿಲ್ಲ. ಇನ್ನೂ ಆನಾ ಸಿನಿಮಾದಲ್ಲಿ ಪ್ರಮುಖಪಾತ್ರದಲ್ಲಿ ಕಾಣಿಸ್ಕೋತಿರೋ ಆರ್ ಎಸ್ಕೆ ಈ ಸಿನಿಮಾದಲ್ಲಿ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾದ ಶೂಟಿಂಗ್ ಮುಂದಿನ ತಿಂಗಳ ಅಂತ್ಯದ ವೇಳೆಗೆ ಶುರುವಾಗುವ ಸಾಧ್ಯತೆಯಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...