alex Certify ಹರಿದ ಜೀನ್ಸ್​ ಧರಿಸಿ ಭಿಕ್ಷುಕರಂತೆ ಕಾಣಬೇಡಿ ಎಂದ ಕಂಗನಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹರಿದ ಜೀನ್ಸ್​ ಧರಿಸಿ ಭಿಕ್ಷುಕರಂತೆ ಕಾಣಬೇಡಿ ಎಂದ ಕಂಗನಾ..!

ಉತ್ತರಾಖಂಡ್​ ಸಿಎಂ ತಿರಥ್​ ಸಿಂಗ್​ ರಾವತ್​ ಹರಿದ ಜೀನ್ಸ್​ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ವಿವಾದ ವ್ಯಕ್ತವಾಗ್ತಿದೆ. ಈ ಸಂಬಂಧ ಇದೀಗ ನಟಿ ಕಂಗನಾ ರಣಾವತ್​ ಕೂಡ ತಮ್ಮ ಅಭಿಪ್ರಾಯವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ.

ಆದರೆ ಉಳಿದ ಸೆಲೆಬ್ರಿಟಿಗಳಂತೆ ಕಂಗನಾ ತಿರಥ್​ ಸಿಂಗ್​ರ ಹೇಳಿಕೆಯನ್ನ ಸಂಪೂರ್ಣವಾಗಿ ವಿರೋಧಿಸಿಲ್ಲ. ಬದಲಾಗಿ ತಾವು ರಿಪ್ಪಡ್​ ಜೀನ್ಸ್​ ಧರಿಸಿದ ಫೋಟೋಗಳನ್ನ ಶೇರ್​ ಮಾಡಿ ಯುವ ಜನತೆಗೆ ಫ್ಯಾಶನ್​ ಟಿಪ್ಸ್ ನೀಡಿದ್ದಾರೆ.

‘ರಾಬರ್ಟ್’ ಭರ್ಜರಿ ಸಕ್ಸಸ್: ಮಂತ್ರಾಲಯದಲ್ಲಿ ಗುರುರಾಯರ ‘ದರ್ಶನ’

ನೀವು ಹರಿದ ಜೀನ್ಸ್​​ನ್ನು ಧರಿಸುವವರಾಗಿದ್ದರೆ ಈ ಫೋಟೋಗಳಲ್ಲಿ ಕಾಣುವಂತೆ ಧರಿಸಿ. ನಿಮ್ಮ ಸ್ಟೈಲ್​ನಿಂದ ನೀವು ಭಿಕ್ಷುಕರಂತೆ ಕಾಣುವಂತೆ ಆಗಬಾರದು. ನಿಮ್ಮ ಜೀನ್ಸ್ ನೋಡಿ ಜನರು ಈ ತಿಂಗಳು ಪೋಷಕರು ಇವರಿಗೆ ಹಣವನ್ನೇ ನೀಡಲಿಲ್ಲ ಎಂದು ಭಾವಿಸುವಂತೆ ಆಗಬಾರದು. ಆದರೆ ಬಹುತೇಕ ಜನರು ಈಗಿನ ದಿನಗಳಲ್ಲಿ ಹೀಗೆಯೇ ಕಾಣುತ್ತಿದ್ದಾರೆ ಎಂದು ಟ್ವೀಟ್​ ಮಾಡಿದ್ದಾರೆ. #RippedJeansTwitter ಎಂಬ ಹ್ಯಾಶ್​ಟ್ಯಾಗ್​​ನ ಅಡಿಯಲ್ಲಿ ಕಂಗನಾ ಈ ಟ್ವೀಟ್​ನ್ನು ಶೇರ್​ ಮಾಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...