ಉತ್ತರಾಖಂಡ್ ಸಿಎಂ ತಿರಥ್ ಸಿಂಗ್ ರಾವತ್ ಹರಿದ ಜೀನ್ಸ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವಿವಾದ ವ್ಯಕ್ತವಾಗ್ತಿದೆ. ಈ ಸಂಬಂಧ ಇದೀಗ ನಟಿ ಕಂಗನಾ ರಣಾವತ್ ಕೂಡ ತಮ್ಮ ಅಭಿಪ್ರಾಯವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಆದರೆ ಉಳಿದ ಸೆಲೆಬ್ರಿಟಿಗಳಂತೆ ಕಂಗನಾ ತಿರಥ್ ಸಿಂಗ್ರ ಹೇಳಿಕೆಯನ್ನ ಸಂಪೂರ್ಣವಾಗಿ ವಿರೋಧಿಸಿಲ್ಲ. ಬದಲಾಗಿ ತಾವು ರಿಪ್ಪಡ್ ಜೀನ್ಸ್ ಧರಿಸಿದ ಫೋಟೋಗಳನ್ನ ಶೇರ್ ಮಾಡಿ ಯುವ ಜನತೆಗೆ ಫ್ಯಾಶನ್ ಟಿಪ್ಸ್ ನೀಡಿದ್ದಾರೆ.
‘ರಾಬರ್ಟ್’ ಭರ್ಜರಿ ಸಕ್ಸಸ್: ಮಂತ್ರಾಲಯದಲ್ಲಿ ಗುರುರಾಯರ ‘ದರ್ಶನ’
ನೀವು ಹರಿದ ಜೀನ್ಸ್ನ್ನು ಧರಿಸುವವರಾಗಿದ್ದರೆ ಈ ಫೋಟೋಗಳಲ್ಲಿ ಕಾಣುವಂತೆ ಧರಿಸಿ. ನಿಮ್ಮ ಸ್ಟೈಲ್ನಿಂದ ನೀವು ಭಿಕ್ಷುಕರಂತೆ ಕಾಣುವಂತೆ ಆಗಬಾರದು. ನಿಮ್ಮ ಜೀನ್ಸ್ ನೋಡಿ ಜನರು ಈ ತಿಂಗಳು ಪೋಷಕರು ಇವರಿಗೆ ಹಣವನ್ನೇ ನೀಡಲಿಲ್ಲ ಎಂದು ಭಾವಿಸುವಂತೆ ಆಗಬಾರದು. ಆದರೆ ಬಹುತೇಕ ಜನರು ಈಗಿನ ದಿನಗಳಲ್ಲಿ ಹೀಗೆಯೇ ಕಾಣುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. #RippedJeansTwitter ಎಂಬ ಹ್ಯಾಶ್ಟ್ಯಾಗ್ನ ಅಡಿಯಲ್ಲಿ ಕಂಗನಾ ಈ ಟ್ವೀಟ್ನ್ನು ಶೇರ್ ಮಾಡಿದ್ದಾರೆ.