alex Certify ಎಲ್ಲೆಡೆ ಸಲಾಂ ‘ರಾಕಿಭಾಯ್’: ದಾಖಲೆಗಳೆಲ್ಲಾ ಧೂಳೀಪಟ – ಹಲ್ಚಲ್ ಸೃಷ್ಠಿಸಿದ ‘ಕೆಜಿಎಫ್ 2’ ಟೀಸರ್ ನಿಂದಲೇ ಭರ್ಜರಿ ಸಕ್ಸಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಲೆಡೆ ಸಲಾಂ ‘ರಾಕಿಭಾಯ್’: ದಾಖಲೆಗಳೆಲ್ಲಾ ಧೂಳೀಪಟ – ಹಲ್ಚಲ್ ಸೃಷ್ಠಿಸಿದ ‘ಕೆಜಿಎಫ್ 2’ ಟೀಸರ್ ನಿಂದಲೇ ಭರ್ಜರಿ ಸಕ್ಸಸ್

ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್ ವುಡ್ ನತ್ತ ಕಣ್ಣರಳಿಸಿ ನೋಡುವಂತೆ ಮಾಡಿದೆ ‘ಕೆಜಿಎಫ್ 2’ ಟೀಸರ್. ಕನ್ನಡದಲ್ಲಿ ‘ಕೆಜಿಎಫ್ 2’ ಟೀಸರ್ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಸ್ಯಾಂಡಲ್ವುಡ್ನಲ್ಲಿ ‘ರಾಕಿ ಭಾಯ್’ ಅತಿದೊಡ್ಡ ದಾಖಲೆ ಬರೆದಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಹಿಂದಿನ ಎಲ್ಲಾ ಚಿತ್ರಗಳ ಟೀಸರ್ ದಾಖಲೆಯನ್ನು ‘ಕೆಜಿಎಫ್ 2’ ನುಂಗಿ ನೀರು ಕುಡಿದಿದೆ. ಈ ಟೀಸರ್ ಅನ್ನು ಒಂದೇ ದಿನದಲ್ಲಿ 70 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಇದುವರೆಗೆ 8.67 ಕೋಟಿ ಜನ ವೀಕ್ಷಿಸಿದ್ದಾರೆ. 49 ಲಕ್ಷ ಲೈಕ್ಸ್ ಬಂದಿದೆ. ಭಾಷೆ ದೇಶದ ಗಡಿ ದಾಟಿ ಜಗತ್ತಿನಾದ್ಯಂತ ‘ಕೆಜಿಎಫ್ 2’ ಟೀಸರ್ ಹವಾ ಎಬ್ಬಿಸಿದೆ. ಸ್ಯಾಂಡಲ್ ವುಡ್ ನಲ್ಲಿ ಅತಿ ದೊಡ್ಡ ದಾಖಲೆ ಸೃಷ್ಟಿಯಾಗಿದೆ.

‘ಕೆಜಿಎಫ್ 2’ ಟೀಸರ್ ಗೆ ಟಾಲಿವುಡ್, ಬಾಲಿವುಡ್, ಕಾಲಿವುಡ್ ಬೆಚ್ಚಿಬಿದ್ದಿದೆ. ವಿಶ್ವದಾದ್ಯಂತ ಟೀಸರ್ ಸದ್ದು ಮಾಡುತ್ತಿದೆ. ದೊಡ್ಡ ಸ್ಟಾರ್ ಗಳಿಗೂ ಟೀಸರ್ ನಿಂದ ಟೆನ್ಶನ್ ಶುರುವಾಗಿದೆ. ಕನ್ನಡ ಮಾತ್ರವಲ್ಲದೇ, ಟಾಲಿವುಡ್, ಕಾಲಿವುಡ್ ನಲ್ಲೂ ಮಾತ್ರವಲ್ಲದೇ, ಯಶ್ ಗೆ ದೇಶಾದ್ಯಂತ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಚಿತ್ರದ ಮೇಲಿನ ನಿರೀಕ್ಷೆ ಭಾರೀ ಹೆಚ್ಚಾಗಿದೆ.

ಮಹೇಶ್ ಬಾಬು, ಅಲ್ಲು ಅರ್ಜುನ್, ಪವನ್ ಕಲ್ಯಾಣ್ ಫ್ಯಾನ್ಸ್ ಕೂಡ ಫಿದಾ ಆಗಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ರಾಕಿಭಾಯ್ ಬಗ್ಗೆ ಜೈಕಾರ ಮೊಳಗತೊಡಗಿದೆ. ದಾಖಲೆಗಳೆಲ್ಲಾ ಧೂಳೀಪಟವಾಗಿ ಸಾಮಾಜಿಕ ಜಾಲತಾಣಗಳಲ್ಲಿಯೂ ಟೀಸರ್ ಧೂಳೆಬ್ಬಿಸುತ್ತಿದೆ.

ರಾಕಿಂಗ್ ಸ್ಟಾರ್ ಯಶ್ ಸಂತಸ ಹಂಚಿಕೊಂಡು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ನಿಮ್ಮೆಲ್ಲರ ಪ್ರೀತಿಗೆ ಆಭಾರಿಯಾಗಿದ್ದೇನೆ. ಹುಟ್ಟುಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...