ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ದಂಪತಿಯ ಪುತ್ರನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೂನಿಯರ್ ಯಶ್ ಆಗಮನವಾಗಿ ಇಂದಿಗೆ ಆರು ತಿಂಗಳು ಪೂರ್ಣಗೊಂಡಿದ್ದು ಅಭಿಮಾನಿಗಳಿಗಾಗಿ ಪುತ್ರನ ಫೋಟೋವನ್ನು ರಾಧಿಕಾ ಪಂಡಿತ್ ಪೋಸ್ಟ್ ಮಾಡಿದ್ದಾರೆ. ಮೊದಲ ಬಾರಿಗೆ ಪುತ್ರನ ಫೋಟೋ ಬಹಿರಂಗಪಡಿಸಿರುವ ಅವರು ಜೂನಿಯರ್ ಯಶ್ ಗೆ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದ ಬೇಕು ಎಂದು ಹೇಳಿದ್ದಾರೆ.
ಹಿಂದಿನ ದಿನ ತಮ್ಮನೊಂದಿಗೆ ಆಯ್ರಾ ಇದ್ದ ಫೋಟೋವನ್ನು ರಾಧಿಕಾ ಪಂಡಿತ್ ಪೋಸ್ಟ್ ಮಾಡಿ ಕುತೂಹಲ ಮೂಡಿಸಿದ್ದರು. ಈಗ ಪುತ್ರನ ಫೋಟೋವನ್ನು ರಿವಿಲ್ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಪಾರ ಸಂಖ್ಯೆಯ ಮಂದಿ ವೀಕ್ಷಿಸಿ ಜೂನಿಯರ್ ಯಶ್ ಗೆ ಶುಭ ಹಾರೈಸಿದ್ದಾರೆ.