alex Certify ನಟನ ಬಳಿ ಸಲೂನ್ ಗೆ ಹೋಗಲು ಸಹಾಯ ಕೇಳಿದ ಮಹಿಳೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟನ ಬಳಿ ಸಲೂನ್ ಗೆ ಹೋಗಲು ಸಹಾಯ ಕೇಳಿದ ಮಹಿಳೆ…!

ಕೊರೋನಾ ಸಂಕಷ್ಟದಲ್ಲಿ ಮುಂಬೈನಲ್ಲಿ ಸಿಲುಕಿದ್ದ ಜನರನ್ನು ಊರಿಗೆ ಕಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ನಟ ಸೋನು ಸೂದ್, ಸಾವಿರಾರು ಜನರ ಪಾಲಿಗೆ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.

ಮುಂಬೈನಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಊಟೋಪಚಾರ, ವಸತಿ ಹಾಗೂ ಊರಿಗೆ ತೆರಳಲು ಬಸ್ ವ್ಯವಸ್ಥೆಯನ್ನು ಸೋನು ಸೂದ್ ಮಾಡಿಕೊಟ್ಟಿದ್ದಾರೆ. ಇದೇ ವೇಳೆ ಅವರಿಗೆ ಅಪರಿಮಿತ ಸಂಖ್ಯೆಯಲ್ಲಿ ಅಭಿನಂದನೆ ಮತ್ತು ಕೋರಿಕೆಗಳು ಬರುತ್ತಿವೆ.

ಲಾಕ್ಡೌನ್ ನಡುವೆ ಮದ್ಯದಂಗಡಿ ತಲುಪಲು ಸಹಾಯ ಮಾಡಲು ಕೋರಿಕೆ, ತನ್ನ‌ ಗೆಳತಿಯೊಂದಿಗೆ ಒಂದಾಗುವಂತೆ ಮಾಡಬೇಕು ಎಂಬ ಮನವಿ, ಹೀಗೆ ಬಗೆಬಗೆಯ ಕೋರಿಕೆಗಳು ಅವರ ಮುಂದೆ ಬಂದಿದೆಯಂತೆ. ಇದೀಗ ಅಂತದ್ದೊಂದು ಕೋರಿಕೆ ಸರಣಿಗೆ ಮಗದೊಂದು ಸೇರ್ಪಡೆಯಾಗಿದೆ.

ಹೇಮಾಲ್ಶ್ ಎಂಬ ಖಾತೆಯಿಂದ ಮಹಿಳೆಯೊಬ್ಬರು ಸೋನು ಸೂದ್ ಗೆ ಟ್ವೀಟ್ ಮಾಡಿ, ಲಾಕ್ಡೌನ್ ನಿಂದಾಗಿ ಕಳೆದ ಎರಡೂವರೆ ತಿಂಗಳಿನಿಂದ ಪಾರ್ಲರ್ ಗೆ ಭೇಟಿ ನೀಡಲು ಸಾಧ್ಯವಾಗಿಲ್ಲ, ಸಲೂನ್ ಗೆ ಭೇಟಿ ನೀಡಲು ಸಹಾಯ ಮಾಡಿ…..ಜಸ್ಟ್ ಕಿಡ್ಡಿಂಗ್, ನೀವು ರಿಯಲ್ ಹೀರೋ…..ಎಂದು ತಮಾಷೆ ಮಾಡಿದ್ದಾರೆ.

ಈ ಹಾಸ್ಯಮಯ ಟ್ವೀಟ್ ಗೆ ಅಷ್ಟೇ ಹಾಸ್ಯವಾಗಿ ಪ್ರತಿಕ್ರಿಯೆ ನೀಡಿರುವ ಸೋನು ಸೂದ್, ನೀವು ಸಲೂನ್ ಗೆ ಏಕೆ ಭೇಟಿ ನೀಡಲು ಬಯಸುತ್ತೀರಿ? ಸಲೂನ್ ಮಾಡುವವರು ತಮ್ಮೂರುಗಳಿಗೆ ತೆರಳಿದ್ದಾರೆ. ನೀವು ಅವರ ಹಳ್ಳಿಗೆ ಹೋಗುವುದಿದ್ದರೆ ಹೇಳಿ ವ್ಯವಸ್ಥೆ ಮಾಡುವೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...