ಬಾಲಿವುಡ್ನ ಅನೇಕ ತಾರೆಯರಿಗೆ ಮಾಲ್ಡೀವ್ಸ್ ಫೇವರಿಟ್ ಹಾಲಿಡೇ ಸ್ಪಾಟ್ ಆಗಿ ಬದಲಾಗಿದೆ. ತಾಪಸಿ ಪನ್ನು, ಕಾಜಲ್ ಅಗರ್ವಾಲ್, ಸಮಂತಾ, ನೇಹಾ ಧೂಪಿಯಾ, ತಾರಾ ಸುತಾರಿಯಾ, ಹೀನಾ ಖಾನ್ ಹೀಗೆ ಸ್ಟಾರ್ ತಾರೆಯರೆಲ್ಲಾ ಒಬ್ಬರ ಹಿಂದೊಬ್ಬರಂತೆ ಮಾಲ್ಡೀವ್ಸ್ಗೆ ಭೇಟಿ ನೀಡ್ತಾನೇ ಇದ್ದಾರೆ.
ಇದೀಗ ಜೈ ಹೋ ಸಿನಿಮಾ ಖ್ಯಾತಿಯ ಡೈಸಿ ಶಾ ಕೂಡ ಮಾಲ್ಡೀವ್ಸ್ಗೆ ಪ್ರಯಾಣ ಬೆಳೆಸಿದ್ದಾರೆ. ತಮ್ಮ ರಜಾ ಮೋಜಿನ ಫೋಟೋಗಳನ್ನ ನಟಿ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡ್ತಾನೇ ಇದ್ದಾರೆ.
ಬುಧವಾರ ಪಿಂಕ್ ಬಣ್ಣದ ಬಿಕಿನಿ ತೊಟ್ಟಿರುವ ಫೋಟೋವೊಂದನ್ನ ನಟಿ ಶೇರ್ ಮಾಡಿದ್ದು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ವಿಡಿಯೋ ಕೂಡ ಶೇರ್ ಮಾಡಿರುವ ನಟಿ ಸಮುದ್ರ ಹಾಗೂ ಆಕಾಶ ಒಂದನ್ನೊಂದು ಸೇರೋದು ಇಲ್ಲೇ ಅಂತಾ ಕ್ಯಾಪ್ಶನ್ ಕೂಡ ನೀಡಿದ್ದಾರೆ .
https://www.instagram.com/p/CIk0PpGDvCi/?utm_source=ig_web_copy_link