ಬಾಲಿವುಡ್ ನಟರಾದ ವಿಕ್ರಾಂತ್ ಮಾಸ್ಸಿ, ಹರ್ಷವರ್ಧನ್ ರಾಣೆ ಮತ್ತು ತಾಪ್ಸಿ ಅಭಿನಯದ ʼಹಸೀನ್ ದಿಲ್ರುಬಾʼ ಚಿತ್ರದ ಮೂಲಕ ಸುದ್ದಿಯಲ್ಲಿದ್ದಾರೆ. ಚಿತ್ರ ಪ್ರಚಾರದ ವೇಳೆ ನಟರು ತಮ್ಮ ಜೀವನದಲ್ಲಾದ ಕೆಲವು ಇಂಟರೆಸ್ಟಿಂಗ್ ವಿಷ್ಯವನ್ನು ಹಂಚಿಕೊಂಡಿದ್ದಾರೆ. ರೇಡಿಯೊ ಕಾರ್ಯಕ್ರಮವೊಂದರಲ್ಲಿ ಆರ್.ಜೆ. ಸಿದ್ಧಾರ್ಥ ಜೊತೆ ಮಾತನಾಡಿದ ವಿಕ್ರಾಂತ್ ಮಾಸ್ಸಿ ಆಸಕ್ತಿದಾಯಕ ವಿಷ್ಯ ಹಂಚಿಕೊಂಡಿದ್ದಾರೆ.
65 ಮಿಲಿಯನ್ ವೀಕ್ಷಣೆ ಪಡೆದ ‘ರಾಬರ್ಟ್’ ಚಿತ್ರದ ‘ಕಣ್ಣು ಹೊಡಿಯಾಕ’ ವಿಡಿಯೋ ಸಾಂಗ್
ವಿಕ್ರಾಂತ್ ಮಾಸ್ಸಿ, ತಾಯಿಯ ಅಜ್ಜಿಯ ಮನೆಯಲ್ಲಿದ್ದಾಗ ನಡೆದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ನನ್ನ ಸೋದರಸಂಬಂಧಿ ಮತ್ತು ನಾನು ವಯಸ್ಕ ಚಿತ್ರವನ್ನು ನೋಡ್ತಿದ್ದೆವು. ಈ ವೇಳೆ ನನ್ನ ಚಿಕ್ಕಮ್ಮ ಕೋಣೆಗೆ ಬಂದರು. ಆಗ ಗಂಟೆ ರಾತ್ರಿ ಮೂರಾಗಿತ್ತು. ಈ ವೇಳೆ ಚಿಕ್ಕಮ್ಮ ಕೋಣೆಗೆ ಬರ್ತಾರೆಂಬ ಕಲ್ಪನೆ ನಮಗಿರಲಿಲ್ಲ. ನಮಗೆ ಮುಜುಗರವಾಯ್ತು ಎಂದು ಮಾಸ್ಸಿ ಹೇಳಿದ್ದಾರೆ.
‘ವೀರಂ’ ಚಿತ್ರದ ಟೀಸರ್ ರಿಲೀಸ್
ಈ ಘಟನೆ ನಂತ್ರ ಚಿಕ್ಕಮ್ಮನ ಬಳಿ ಹೋಗಲು ಮುಜುಗರವಾಗ್ತಿತ್ತು. ನೀರು ಕೇಳುವಾಗ್ಲೂ ನಮಗೆ ನಾಚಿಕೆಯಾಗ್ತಿತ್ತು. ನಮ್ಮ ಪುಣ್ಯಕ್ಕೆ ಚಿಕ್ಕಮ್ಮ, ಅಮ್ಮನಿಗೆ ಈ ವಿಷ್ಯ ಹೇಳಲಿಲ್ಲವೆಂದು ಮಾಸ್ಸಿ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಹರ್ಷವರ್ಧನ್ ಕೂಡ, ಪೋರ್ನ್ ಪುಸ್ತಕ ಹಾಗೂ ಸಿನಿಮಾಗಳನ್ನು ವೀಕ್ಷಣೆ ಮಾಡ್ತಿದ್ದೆ ಎಂದಿದ್ದಾರೆ.