![](https://kannadadunia.com/wp-content/uploads/2021/01/pjimage-2021-01-18t140001-1610958619.jpg)
ಸಿಕ್ಕಾಪಟ್ಟೆ ತಿಂದು ದೈತ್ಯನಂತೆ ಕಾಣುತ್ತಿರುವ ಅದ್ನಾನ್ ಸಾಮಿಯ ಹಳೆಯ ಫೋಟೋ ಇದಾಗಿದೆ. ಬರೋಬ್ಬರಿ 230 ಕೆಜಿ ಇದ್ದ ಅದ್ನಾನ್ ಸಾಮಿ ಸಾಕಷ್ಟು ಡಯಟ್ ಹಾಗೂ ದೇಹದಂಡನೆ ಮೂಲಕ ತಮ್ಮ ತೂಕವನ್ನ 75 ಕೆಜಿಗೆ ಇಳಿಸಿದ್ದಾರೆ.
ಅಂದಹಾಗೆ ಅದ್ನಾನ್ ಸಾಮಿ ತಮ್ಮ ಹಳೆಯ ಫೋಟೋವನ್ನ ಟ್ವಿಟರ್ನಲ್ಲಿ ಶೇರ್ ಮಾಡೋಕೆ ಕಾರಣ ಅವರ ಪತ್ನಿ ಮಾಡಿದ ಅಡುಗೆಯಿಂದಾಗಿದೆ. ಅದ್ನಾನ್ ಸಾಮಿ ಪತ್ನಿ ರೋಯಾ ಸಾಮಿ, ನಿಹಾರಿ ಎಂಬ ಹೆಸರಿನ ಖಾದ್ಯವನ್ನ ತಯಾರಿಸಿದ್ದರು. ಈ ಫೋಟೋವನ್ನ ಅದ್ನಾನ್ ಸಾಮಿ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಟ್ವೀಟಿಗರೊಬ್ಬರು. ತುಂಬಾ ಎಣ್ಣೆ ಹಾಕಿದ್ದೀರಾ. ಇದು ನಿಹಾರಿಯಂತೆ ಕಾಣುತ್ತಿಲ್ಲ. ಆದರೂ ಇದನ್ನ ನೀವು ನಿಹಾರಿ ಅಂತಾ ಕರೆಯೋದಾದ್ರೆ ಕರೀರಿ ಎಂದು ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಯಾಗಿ ತಮ್ಮ ಥ್ರೋ ಬ್ಯಾಕ್ ಚಿತ್ರ ಹಂಚಿಕೊಂಡ ಸಾಮಿ, ಕೆಳಗೆ ಕಾಣುತ್ತಿರೋ ಈ ದೈತ್ಯ ವ್ಯಕ್ತಿಯನ್ನ ನೋಡಿದ್ದೀರಾ? ಅದು ನಾನೆ. ನಾನು ಕೇವಲ ಕ್ಯಾಲೋರಿಯುಕ್ತ ಆಹಾರ ತಿಂದು ಹೀಗಾಗಿದ್ದಲ್ಲ. ನಾನು ಅಗತ್ಯಕ್ಕಿಂತ ಜಾಸ್ತಿ ತಿಂದು ಈ ರೀತಿ ಆಗಿದ್ದೆ. ತಿನಿಸಿನ ವಿಚಾರದಲ್ಲಿ ನನ್ನೊಂದಿಗೆ ವಾದಕ್ಕೇ ಇಳಿಯಬೇಡಿ. ಯಾಕಂದ್ರೆ ನಾನು ತಿಂಡಿ ತಿನಿಸುಗಳ ಬಗ್ಗೆ ಮಾಡಿದ ಸಂಶೋಧನೆಗಳು ಬಹಳ ತಲೆಮಾರಿಗೆ ಸಾಕಾಗುವಷ್ಟಿದೆ. ನಿಹಾರಿಗೆ ಯಾವತ್ತೂ ಜಾಸ್ತಿ ತುಪ್ಪವನ್ನ ಹಾಕಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.
https://twitter.com/AdnanSamiLive/status/1350834302003671043