ಖಾಸಗಿ ಸುದ್ದಿ ಮಾಧ್ಯಮ ಹಾಗೂ ಹಾರ್ಪಿಕ್ ಇಂಡಿಯಾ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಮಿಷನ್ ಪಾನಿ ಅಭಿಯಾನಕ್ಕೆ ಈಗಾಗಲೇ ಅನೇಕ ಗಣ್ಯ ನಾಯಕರು ಕೈ ಜೋಡಿಸಿದ್ದಾರೆ. ನೀರನ್ನ ಮಿತವಾಗಿ ಖರ್ಚು ಮಾಡಿ ಅದನ್ನ ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವ ಪ್ರಯತ್ನ ಇದಾಗಿದೆ. ಈ ಅಭಿಯಾನದ ರಾಯಭಾರಿಯಾಗಿರುವ ಅಕ್ಷಯ್ ಕುಮಾರ್, ಜಲಚಿಕಿತ್ಸೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದ್ದಾರೆ.
ನೀರನ್ನ ಸಂರಕ್ಷಿಸುವ ಅಗತ್ಯತೆಯ ಬಗ್ಗೆ ಜನರನ್ನುದ್ದೇಶಿಸಿ ಮಾತನಾಡಿದ ಅಕ್ಷಯ್ ಕುಮಾರ್, ದೇಹದಲ್ಲಿನ ಅನೇಕ ಸಮಸ್ಯೆಗೆ ಜಲಚಿಕಿತ್ಸೆಗೆ ಹೇಗೆ ಪರಿಹಾರ ನೀಡಿದೆ ಎಂದು ಹೇಳಿದ್ದಾರೆ. ಅಕ್ವಾ ಥೆರಪಿ ಅನ್ನೋದು ನೀರಿನ ಸಹಾಯದಿಂದ ನೀಡುವ ಒಂದು ಚಿಕಿತ್ಸೆಯಾಗಿದೆ. ನಾನು 1990ರಲ್ಲಿ ಸ್ಲಿಪ್ ಡಿಸ್ಕ್ ಸಮಸ್ಯೆಯಿಂದ ಬಳಲುತ್ತಿದ್ದೆ. ಈ ಸಂದರ್ಭದಲ್ಲಿ ಎಷ್ಟು ಚಿಕಿತ್ಸೆ ಪಡೆದರೂ ನನಗೆ ಈ ಸಮಸ್ಯೆಯಿಂದ ಪಾರಾಗೋಕೆ ಸಾಧ್ಯವೇ ಆಗಿರಲಿಲ್ಲ. ಆದರೆ ಹೈಡ್ರೋಥೆರಪಿ ಮೂಲಕ ನಾನು ಸ್ಲಿಪ್ ಡಿಸ್ಕ್ ಸಮಸ್ಯೆಯಿಂದ ಪಾರಾದೆ ಎಂದು ಹೇಳಿದ್ರು.
ಸಿನಿಮಾವೊಂದರ ಚಿತ್ರೀಕರಣದ ಸಂದರ್ಭದಲ್ಲಿ ಕಷ್ಟಕರವಾದ ಸಾಹಸವೊಂದನ್ನ ಪ್ರದರ್ಶಿಸುತ್ತಿದ್ದ ವೇಳೆ ಸ್ಲಿಪ್ ಡಿಸ್ಕ್ ಸಮಸ್ಯೆ ಎದುರಾಯಿತು. ಯಾವುದೇ ಚಿಕಿತ್ಸೆಯೂ ಈ ಸಮಸ್ಯೆಗೆ ಪರಿಹಾರ ನೀಡದಿದ್ದಾಗ ವೈದ್ಯರು ಜಲಚಿಕಿತ್ಸೆಗೆ ಒಳಗಾಗುವಂತೆ ಸೂಚನೆ ನೀಡಿದ್ರು. ನೀರಿನಲ್ಲಿ ವಿವಿಧ ವ್ಯಾಯಾಮಗಳನ್ನ ಮಾಡಿಸುವ ಮೂಲಕ ನನಗೆ ಈ ಸಮಸ್ಯೆಯಿಂದ ವೈದ್ಯರು ಬಚಾವ್ ಮಾಡಿದ್ರು ಎಂದು ಹೇಳಿದ್ರು. ಅಲ್ಲದೇ ವಾಟರ್ ಟ್ರೆಡ್ ಮಿಲ್ನಲ್ಲಿ ತಾನು ಜಾಗಿಂಗ್ ಮಾಡ್ತಿರುವ ವಿಡಿಯೋವನ್ನ ಅಕ್ಷಯ್ ಕುಮಾರ್ ಪ್ರದರ್ಶಿಸಿದ್ರು.