alex Certify ವಿಚಿತ್ರ ನೃತ್ಯದ ಮೂಲಕ ನೆಟ್ಟಿಗರ ತಲೆಗೆ ಹುಳ ಬಿಟ್ಟ ಯುವತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚಿತ್ರ ನೃತ್ಯದ ಮೂಲಕ ನೆಟ್ಟಿಗರ ತಲೆಗೆ ಹುಳ ಬಿಟ್ಟ ಯುವತಿ..!

ಕಾರ್ಯಕ್ರಮಗಳಲ್ಲಿ ನೃತ್ಯ ಮಾಡೋದು ಕಾಮನ್. ಆದರೆ ಈ ನೃತ್ಯದ ವಿಡಿಯೋಗಳು ಕೆಲವೊಮ್ಮೆ ನಮ್ಮ ಸೋಶಿಯಲ್ ಮೀಡಿಯಾದಲ್ಲಿ ರಾತ್ರೋ ರಾತ್ರಿ ಹಿಟ್​ ಆಗುವಂತೆ ಮಾಡಿಬಿಡುತ್ತವೆ. ರಷ್ಯಾದ ಚೆಚೆನ್ಯಾದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಯುವತಿಯೊಬ್ಬಳು ಹೆಜ್ಜೆ ಹಾಕಿದ್ದು ಟಿಕ್​ಟಾಕ್​ನಲ್ಲಿ ಈ ವಿಡಿಯೋ ಸಖತ್​ ಸದ್ದು ಮಾಡಿದೆ.

ಈ ಟಿಕ್​ಟಾಕ್ ವಿಡಿಯೋವನ್ನ ಟ್ವಿಟರ್​ನಲ್ಲೂ ಹಂಚಿಕೊಳ್ಳಲಾಗಿದೆ. ಕಪ್ಪು ಹಾಗೂ ಬಂಗಾರ ಬಣ್ಣದ ಲೆಹಂಗಾ ಹಾಕಿರುವ ಯುವತಿಯ ಹೆಜ್ಜೆಯನ್ನ ಅಂದಾಜು ಮಾಡೋಕೆ ಸಾಧ್ಯವಾಗ್ತಿಲ್ಲ. ಈಕೆಯ ಜೊತೆ ಕೆಲ ಪುರುಷರೂ ನೃತ್ಯ ಮಾಡಿದ್ದಾರೆ. ಈ ವಿಡಿಯೋದಲ್ಲಿ ಈಕೆ ಕಾಲಿಗೆ ಚಕ್ರ ಹಾಕಿಕೊಂಡವರಂತೆ ಚಲಿಸುವ ರೀತಿಯಲ್ಲಿ ಹೆಜ್ಜೆ ಹಾಕಿದ್ದಾಳೆ.

ಈ ವಿಡಿಯೋ ಬರೋಬ್ಬರಿ 70.6 ಸಾವಿರ ವೀವ್ಸ್ ಪಡೆದುಕೊಂಡಿದೆ. ಈಕೆಯ ನೃತ್ಯ ಪ್ರಕಾರ ಕಂಡು ನೆಟ್ಟಿಗರು ಹುಬ್ಬೇರಿಸಿದ್ದಾರೆ. ಅನೇಕರು ಈಕೆ ಮನುಷ್ಯೆಯೇ ಅಲ್ಲ ಗೊಂಬೆ ಎಂದು ಹೇಳ್ತಿದ್ದಾರೆ. ಆದರೆ ನೃತ್ಯ ಮಾಡುವ ವೇಳೆ ಆಕೆಯ ಪಾದ ಕೂಡ ಕಾಣಿಸಿರೋದ್ರಿಂದ ಜನರಿಗೆ ಇಲ್ಲಿ ಏನು ನಡೀತಾ ಇದೆ ಅನ್ನೋದನ್ನ ಡಿಕೋಡ್​ ಮಾಡಲಾಗದೇ ತಲೆ ಕೆಡಿಸಿಕೊಂಡಿದ್ದಾರೆ.

— The Sun (@TheSun) April 18, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...