
ಈ ಟಿಕ್ಟಾಕ್ ವಿಡಿಯೋವನ್ನ ಟ್ವಿಟರ್ನಲ್ಲೂ ಹಂಚಿಕೊಳ್ಳಲಾಗಿದೆ. ಕಪ್ಪು ಹಾಗೂ ಬಂಗಾರ ಬಣ್ಣದ ಲೆಹಂಗಾ ಹಾಕಿರುವ ಯುವತಿಯ ಹೆಜ್ಜೆಯನ್ನ ಅಂದಾಜು ಮಾಡೋಕೆ ಸಾಧ್ಯವಾಗ್ತಿಲ್ಲ. ಈಕೆಯ ಜೊತೆ ಕೆಲ ಪುರುಷರೂ ನೃತ್ಯ ಮಾಡಿದ್ದಾರೆ. ಈ ವಿಡಿಯೋದಲ್ಲಿ ಈಕೆ ಕಾಲಿಗೆ ಚಕ್ರ ಹಾಕಿಕೊಂಡವರಂತೆ ಚಲಿಸುವ ರೀತಿಯಲ್ಲಿ ಹೆಜ್ಜೆ ಹಾಕಿದ್ದಾಳೆ.
ಈ ವಿಡಿಯೋ ಬರೋಬ್ಬರಿ 70.6 ಸಾವಿರ ವೀವ್ಸ್ ಪಡೆದುಕೊಂಡಿದೆ. ಈಕೆಯ ನೃತ್ಯ ಪ್ರಕಾರ ಕಂಡು ನೆಟ್ಟಿಗರು ಹುಬ್ಬೇರಿಸಿದ್ದಾರೆ. ಅನೇಕರು ಈಕೆ ಮನುಷ್ಯೆಯೇ ಅಲ್ಲ ಗೊಂಬೆ ಎಂದು ಹೇಳ್ತಿದ್ದಾರೆ. ಆದರೆ ನೃತ್ಯ ಮಾಡುವ ವೇಳೆ ಆಕೆಯ ಪಾದ ಕೂಡ ಕಾಣಿಸಿರೋದ್ರಿಂದ ಜನರಿಗೆ ಇಲ್ಲಿ ಏನು ನಡೀತಾ ಇದೆ ಅನ್ನೋದನ್ನ ಡಿಕೋಡ್ ಮಾಡಲಾಗದೇ ತಲೆ ಕೆಡಿಸಿಕೊಂಡಿದ್ದಾರೆ.