
ಈಗ ಅವರ ಫ್ಯಾನ್ ಕ್ಲಬ್ ನಲ್ಲಿ ಅಭಿಮಾನಿಯೊಬ್ಬರು ಬಾಲಕಿಯೊಬ್ಬಳು ಹೃತಿಕ್ ಹಾಡಿಗೆ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು. ಅದನ್ನು ಹೃತಿಕ್ ಷೇರ್ ಮಾಡಿ ಹೊಗಳಿದ್ದಾರೆ.
ಜೈ ಜೈ ಶಿವಶಂಕರ್ ಎಂಬ ಹಾಡಿಗೆ ಪುಟ್ಟ ಬಾಲಕಿ ಹೆಜ್ಜೆ ಹಾಕಿದ್ದು, ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾಳೆ. ಈ ವಿಡಿಯೋವನ್ನು ತನ್ನ ಫ್ಯಾನ್ ಕ್ಲಬ್ ನಲ್ಲಿ ಗಮನಿಸಿದ ಹೃತಿಕ್ ಅದನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ವಾಟ್ ಎ ಸ್ಟಾರ್ ಲವ್ ! ಎಂಬ ಅಡಿಬರಹವನ್ನೂ ಹಾಕಿದ್ದಾರೆ. ಅವರು ವಿಡಿಯೋ ಅಪ್ಲೋಡ್ ಮಾಡುತ್ತಿದ್ದಂತೆ ವೈರಲ್ ಆಗಿದೆ.
ಈ ವಿಡಿಯೋವನ್ನು ಪೋಸ್ಟ್ ಮಾಡಿದ ಒಂದೇ ದಿನದಲ್ಲಿ 25.1k ಮಂದಿ ವೀಕ್ಷಿಸಿದ್ದು, 2 ಸಾವಿರಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ. ಸದ್ಯ ಹೃತಿಕ್ ರೋಷನ್ ಅವರು ಮಾಜಿ ಪತ್ನಿ ಸುಸೈನೆ ಖಾನ್ ಹಾಗೂ ಮಕ್ಕಳ ಜೊತೆ ಸೆಲ್ಫ್ ಕ್ವಾರಂಟೇನ್ ನಲ್ಲಿದ್ದಾರೆ.