![Watch: Former Miss Colombia Grooves to Music Weeks After Getting ...](https://images.news18.com/ibnlive/uploads/2020/07/1594211976_untitled-design-86.png?impolicy=website&width=536&height=356)
2011ರ ಮಿಸ್ ಕೊಲಂಬಿಯಾ ವಿಜೇತೆ ಡೆನಿಯೆಲ್ಲಾ ಅಲ್ವಾರೆಝ್ ತಮ್ಮ ದಿಟ್ಟತನದ ಕಾರಣದಿಂದ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದ್ದಾರೆ.
ಪದೇ ಪದೇ ಸರ್ಜರಿಗೆ ಒಳಗಾದ ಕಾರಣ ತಮ್ಮ ಎಡಗಾಲಿನ ಬಹುಭಾಗವನ್ನು ತೆಗೆದು ಹಾಕಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಿಸಿದ 32 ವರ್ಷದ ಡೇನಿಯೆಲ್ಲಾ, ತಮಗಾದ ಈ ನೋವಿನಿಂದ ಕೊರಗುತ್ತಾ ಕೂರದೇ ಜೀವನೋತ್ಸಾಹದ ಚಿಲುಮೆಯಾಗಿ ಬದುಕುತ್ತಿದ್ದಾರೆ.
ತಮ್ಮ ಎಡಗಾಲನ್ನು ತೆಗೆದುಹಾಕಿದ ಕೆಲವೇ ವಾರಗಳ ಬಳಿಕ, ಇತ್ತೀಚೆಗೆ ತಮ್ಮ ಸಹೋದರ ರಿಕಿ ಅಲ್ವರೆಝ್ ಜೊತೆಗೆ ಹಾಡೊಂದಕ್ಕೆ ಹೆಜ್ಜೆ ಹಾಕುತ್ತಿರುವ ತಮ್ಮ ವಿಡಿಯೋವನ್ನು ಡೇನಿಯೆಲ್ಲಾ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
https://www.instagram.com/tv/CCR7wjep81o/?utm_source=ig_embed
https://www.instagram.com/p/CBbc5kAJXHc/?utm_source=ig_embed