alex Certify ಪಂಜಾಬ್​ ಸಿಎಂ ಹಾಗೂ ಜಮ್ಮು & ಕಾಶ್ಮೀರ ಮಾಜಿ ಸಿಎಂ ನೃತ್ಯದ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಂಜಾಬ್​ ಸಿಎಂ ಹಾಗೂ ಜಮ್ಮು & ಕಾಶ್ಮೀರ ಮಾಜಿ ಸಿಎಂ ನೃತ್ಯದ ವಿಡಿಯೋ ವೈರಲ್

ಸುಮಧುರ ಸಂಗೀತ ಹಾಗೂ ಮನೋಹರ ನೃತ್ಯ ಎಂಥವರನ್ನ ಸಂತೋಷದ ಕಡಲಲ್ಲಿ ತೇಲಿಸುತ್ತೆ. ಅದೇ ರೀತಿ ಪಂಜಾಬ್​ ಸಿಎಂ ಅಮರಿಂದರ್​ ಸಿಂಗ್​ ಮೊಮ್ಮಗಳ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್​ ಅಬ್ದುಲ್ಲಾ ಸಂಗೀತ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದ್ದಾರೆ. ‌

ಅಮರಿಂದರ್​ ಸಿಂಗ್​ ಪುತ್ರ ರಣಿಂದರ್​ ಸಿಂಗ್​​ ಪುತ್ರಿ ಸೆಹರಿಂದರ್​ ಕೌರ್​ ವಿವಾಹ ಮಹೋತ್ಸವದಲ್ಲಿ ಅಬ್ದುಲ್ಲಾ ಹೆಜ್ಜೆ ಹಾಕಿದ್ದು ಈ ವಿಡಿಯೋ ಸಖತ್​ ವೈರಲ್​ ಆಗಿದೆ.

83 ವರ್ಷದ ಫಾರೂಕ್​ ಅಬ್ದುಲ್ಲಾ ನೃತ್ಯ ಮಾಡುತ್ತಾ ತಮ್ಮದೇ ಲೋಕದಲ್ಲಿ ಎಂಜಾಯ್​ ಮಾಡ್ತಿರೋದನ್ನ ನೀವು ನೋಡಬಹುದಾಗಿದೆ.

ಅಬ್ದುಲ್ಲಾ, ಬಳಿಕ ಅಮರಿಂದರ್​ ಸಿಂಗ್​ ಬಳಿ ಹೋಗಿ ಅವರನ್ನ ಎಳೆದು ತಂದು ಹೆಜ್ಜೆ ಹಾಕಿಸಿದ್ದಾರೆ. ‘ಆಜ್​ ಕಲ್​ ತೆರೆ ಮೆರೆ ಪ್ಯಾರ್​ ಕೆ ಚರ್ಚೆ’ ಹಾಗೂ ‘ ಗುಲಾಬಿ ಆಂಖೆ ಜೋ ತೇರಿ ದೇಖಿ’ ಹಾಡಿಗೆ ಇಬ್ಬರು ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

— Nasir Khuehami (ناصر کہویہامی) (@NasirKhuehami) March 4, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...