
ಅಮರಿಂದರ್ ಸಿಂಗ್ ಪುತ್ರ ರಣಿಂದರ್ ಸಿಂಗ್ ಪುತ್ರಿ ಸೆಹರಿಂದರ್ ಕೌರ್ ವಿವಾಹ ಮಹೋತ್ಸವದಲ್ಲಿ ಅಬ್ದುಲ್ಲಾ ಹೆಜ್ಜೆ ಹಾಕಿದ್ದು ಈ ವಿಡಿಯೋ ಸಖತ್ ವೈರಲ್ ಆಗಿದೆ.
83 ವರ್ಷದ ಫಾರೂಕ್ ಅಬ್ದುಲ್ಲಾ ನೃತ್ಯ ಮಾಡುತ್ತಾ ತಮ್ಮದೇ ಲೋಕದಲ್ಲಿ ಎಂಜಾಯ್ ಮಾಡ್ತಿರೋದನ್ನ ನೀವು ನೋಡಬಹುದಾಗಿದೆ.
ಅಬ್ದುಲ್ಲಾ, ಬಳಿಕ ಅಮರಿಂದರ್ ಸಿಂಗ್ ಬಳಿ ಹೋಗಿ ಅವರನ್ನ ಎಳೆದು ತಂದು ಹೆಜ್ಜೆ ಹಾಕಿಸಿದ್ದಾರೆ. ‘ಆಜ್ ಕಲ್ ತೆರೆ ಮೆರೆ ಪ್ಯಾರ್ ಕೆ ಚರ್ಚೆ’ ಹಾಗೂ ‘ ಗುಲಾಬಿ ಆಂಖೆ ಜೋ ತೇರಿ ದೇಖಿ’ ಹಾಡಿಗೆ ಇಬ್ಬರು ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.