ಬಾಲಿವುಡ್ನ ಹಿನ್ನೆಲೆ ಗಾಯಕ ವಿಶಾಲ್ ದದ್ಲಾನಿ ಅಂದರೆ ಯಾರಿಗ್ ತಾನೆ ಗೊತ್ತಿಲ್ಲ ಹೇಳಿ.
ಬಾಲಿವುಡ್ ಲೋಕಕ್ಕೆ ಸಾಕಷ್ಟು ಪ್ರಸಿದ್ಧ ಗೀತೆಗಳನ್ನ ನೀಡಿರುವ ಈ ಸಂಗೀತ ಸಂಯೋಜಕ, ಗಾಯಕ ಹಾಗೂ ಗೀತ ರಚನೆಕಾರ ಸದ್ಯ ಇಂಡಿಯನ್ ಐಡಲ್ 12ನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ತಿದ್ದಾರೆ.
ಆದರೆ ಈ ಖ್ಯಾತ ಗಾಯಕ ಇನ್ಸ್ಟಾಗ್ರಾಂನಲ್ಲಿ ವಿಚಿತ್ರ ಪೋಸ್ಟ್ ಒಂದನ್ನ ಶೇರ್ ಮಾಡುವ ಮೂಲಕ ಅಭಿಮಾನಿಗಳ ಬೇಸರಕ್ಕೆ ಕಾರಣರಾಗಿದ್ದಾರೆ.
ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ವಿಶಾಲ್ ತಮ್ಮ ಸಾವಿನ ಬಗ್ಗೆ ಮಾತುಗಳನ್ನಾಡಿದ್ದಾರೆ..! ಕಳೆದೊಂದು ವರ್ಷದಿಂದ ಬಾಲಿವುಡ್ ಖ್ಯಾತ ತಾರೆಯರನ್ನ ಕಳೆದುಕೊಂಡು ದುಃಖದಲ್ಲಿದೆ. ಈ ನಡುವೆ ಗಾಯಕ ವಿಶಾಲ್ ದದ್ಲಾನಿಯ ಈ ಪೋಸ್ಟ್ ಸಾಕಷ್ಟು ಮಂದಿಯ ನೋವಿಗೆ ಕಾರಣವಾಗಿದೆ.
ಬೈಕ್ ಸ್ಟಂಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ಯುವತಿ
ಇನ್ಸ್ಟಾಗ್ರಾಂನಲ್ಲಿ ತಮ್ಮ ಫೋಟೋವನ್ನ ಶೇರ್ ಮಾಡಿರುವ ವಿಶಾಲ್ ದದ್ಲಾನಿ, ಈತ ಒಳ್ಳೆಯ ವ್ಯಕ್ತಿಯಾಗಿದ್ದ..! ಈ ಕಡಿಮೆ ರೆಸಲ್ಯೂಷನ್ ಫೋಟೋ ನನ್ನ ಅಂತ್ಯಕ್ರಿಯೆಯಂದು ದೊಡ್ಡ ಫ್ರೇಮ್ನಲ್ಲಿ ಫಿಟ್ ಆಗಬಹುದಲ್ಲವೇ..? ಅರೆ..! ನಾನು ಅಸ್ವಸ್ಥನಾಗಿಲ್ಲ..! ಈ ಫೋಟೋವನ್ನ ನೋಡಿದಾಗ ನನಗೆ ಆ ರೀತಿ ಎನಿಸಿದೆ. ಅಲ್ಲದೇ ನಾನು ಶುಭ ಹಾಗೂ ಅಶುಭಗಳ ನಡುವೆ ನಂಬಿಕೆ ಇಡುವವನಲ್ಲ.
ತಮ್ಮ ಪ್ರೀತಿಪಾತ್ರರನ್ನ ಕಳೆದುಕೊಂಡವರನ್ನ ನಾನು ಅಗೌರವಿಸುತ್ತಿಲ್ಲ. ಅಥವಾ ನಾವು ಕಳೆದುಕೊಂಡವರನ್ನೂ ನಾನು ಅಗೌರವಿಸುತ್ತಿಲ್ಲ. ಸಾವು ಅನ್ನೋದು ದೊಡ್ಡ ಸವಾಲು..! ಆದರೆ ನನಗೆ ಸಾವನ್ನ ಕಂಡರೆ ಭಯವಿಲ್ಲ. ಒಂದಲ್ಲ ಒಂದಿನ ಅದು ನಮ್ಮೆಲ್ಲರಿಗೂ ಬರುತ್ತೆ. ಹೀಗಾಗಿ ನನ್ನ ಫೋಟೋವನ್ನ ನಾನೆ ಆಯ್ಕೆ ಮಾಡಿಕೊಂಡಿದ್ದೇನೆ ಎಂದಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು ಅಸಮಾಧಾನಕ್ಕೆ ಒಳಗಾಗಿದ್ದಾರೆ..!
https://www.instagram.com/p/CMjA0s2jY4I/?utm_source=ig_web_copy_link