
ಸೂಪರ್ ಸ್ಟಾರ್ ಇಳಯ ದಳಪತಿ ವಿಜಯ್ ನಟನೆಗೆ ಮೂರು ವರ್ಷ ಬ್ರೇಕ್ ಹಾಕಲಿದ್ದಾರೆ. 2026 ರಲ್ಲಿ ನಡೆಯುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಗಮನ ಕೇಂದ್ರೀಕರಿಸುವ ಉದ್ದೇಶದಿಂದ ಅವರು ಅಭಿನಯದಿಂದ ದೂರ ಉಳಿಯಲಿದ್ದಾರೆ ಎನ್ನಲಾಗಿದೆ.
‘ಲಿಯೋ’ ಸಿನಿಮಾ ಮುಗಿದ ನಂತರ ವಿಜಯ್ ಮೂರು ವರ್ಷ ನಟನೆಯಿಂದ ಬ್ರೇಕ್ ತೆಗೆದುಕೊಳ್ಳಲಿದ್ದಾರೆ. ರಾಜಕೀಯದತತ್ ಗಮನಹರಿಸಲು ಮುಂದಾಗಿರುವ ಅವರು ‘ದಳಪತಿ ವಿಜಯ್ ಮಕ್ಕಳ್ ಇಯಕ್ಕಂ’ ಅಭಿಮಾನಿಗಳ ಸಂಘ ಆರಂಭಿಸಿ ರಾಜ್ಯದಾದ್ಯಂತ ಯುವಜನತೆಯನ್ನು ಸಂಘಟಿಸುತ್ತಿದ್ದಾರೆ.
3 ವರ್ಷ ನಟನೆಯಿಂದ ದೂರ ಉಳಿಯಲಿರುವ ಅವರು ರಾಜಕೀಯದಲ್ಲಿ ಸಕ್ರಿಯರಾಗಲಿದ್ದು, ನಂತರ ಮತ್ತೆ ಸಿನಿಮಾಗಳಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.