alex Certify ತಾಯಿ ಶಿಲ್ಪಾರಂತೆಯೇ ನೃತ್ಯ ಮಾಡಿದ ಪುತ್ರ ವಿಯಾನ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿ ಶಿಲ್ಪಾರಂತೆಯೇ ನೃತ್ಯ ಮಾಡಿದ ಪುತ್ರ ವಿಯಾನ್…!

ಶಿಲ್ಪಾ ಶೆಟ್ಟಿ ಹಾಗೂ ರಾಜ್​​ ಕುಂದ್ರಾ ದಂಪತಿ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಆಗಾಗ ಪುತ್ರ ವಿಯಾನ್​ ರಾಜ್​ ಕುಂದ್ರಾರ ವಿಡಿಯೋಗಳನ್ನ ಶೇರ್​ ಮಾಡ್ತಾನೇ ಇರ್ತಾರೆ. ಇದೀಗ ಈ ಸಾಲಿಗೆ ಇನ್ನೊಂದು ವಿಡಿಯೋವನ್ನ ರಾಜ್​ ಕುಂದ್ರಾ ಸೇರ್ಪಡೆ ಮಾಡಿದ್ದಾರೆ.

ಈ ವಿಡಿಯೋದಲ್ಲಿ ಶಿಲ್ಪಾ ಶೆಟ್ಟಿ ಶೂಟಿಂಗ್​ ಸೆಟ್​ನಲ್ಲಿ ನೃತ್ಯ ಮಾಡುತ್ತಿದ್ದರೆ ಪುತ್ರ ವಿಯಾನ್​ ಶೂಟಿಂಗ್​ ಸೆಟ್​ನಿಂದ ಹೊರನಿಂತು ತಾಯಿಯ ನೃತ್ಯದ ಹೆಜ್ಜೆಗಳನ್ನ ಅನುಕರಿಸಿದ್ದಾನೆ. ತಾಯಿ ಹಾಗೂ ಮಗನ ಈ ಜುಗಲ್ ಬಂಧಿಯನ್ನ ತಂದೆ ರಾಜ್​ಕುಂದ್ರಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ.

ಕೆಲದಿನಗಳ ಹಿಂದಷ್ಟೇ ವಿಯಾನ್​ ತನ್ನ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದ. ಪುತ್ರನ ಜನ್ಮದಿನದಂದು ಶಿಲ್ಪಾ ಒಂದು ಸುಂದರ ಸಂದೇಶವನ್ನ ಇನ್​ಸ್ಟಾದಲ್ಲಿ ಶೇರ್​ ಮಾಡಿದ್ದರು. ನೀನು ಈ ಹೊಸ ಜೀವನಕ್ಕೆ ಹೊಂದಿಕೊಂಡಿದ್ದು ಮಾತ್ರವಲ್ಲದೇ ಈ ಹೊಸ ಜೀವನ ಕ್ರಮದ ಬಗ್ಗೆ ಒಂದೇ ಒಂದು ದೂರನ್ನೂ ಹೊಂದಿಲ್ಲ. ನೀನಿಗ ಅಣ್ಣನ ಜವಾಬ್ದಾರಿಯನ್ನ ಅತ್ಯಂತ ಸುಂದರವಾಗಿ ನಿಭಾಯಿಸುತ್ತಿದ್ದೀಯಾ. ಈ ಲಾಕ್​ಡೌನ್​ ನಿನ್ನನ್ನ ತುಂಬಾ ಬೇಗನೆ ಪ್ರಬುದ್ಧನನ್ನಾಗಿ ಮಾಡಿದೆ. ನಾನೊಬ್ಬ ಹೆಮ್ಮೆಯ ತಾಯಿ ಎಂದು ಬರೆದುಕೊಂಡಿದ್ದರು.

View this post on Instagram

A post shared by Raj Kundra (@rajkundra9)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...