ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ದಂಪತಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಆಗಾಗ ಪುತ್ರ ವಿಯಾನ್ ರಾಜ್ ಕುಂದ್ರಾರ ವಿಡಿಯೋಗಳನ್ನ ಶೇರ್ ಮಾಡ್ತಾನೇ ಇರ್ತಾರೆ. ಇದೀಗ ಈ ಸಾಲಿಗೆ ಇನ್ನೊಂದು ವಿಡಿಯೋವನ್ನ ರಾಜ್ ಕುಂದ್ರಾ ಸೇರ್ಪಡೆ ಮಾಡಿದ್ದಾರೆ.
ಈ ವಿಡಿಯೋದಲ್ಲಿ ಶಿಲ್ಪಾ ಶೆಟ್ಟಿ ಶೂಟಿಂಗ್ ಸೆಟ್ನಲ್ಲಿ ನೃತ್ಯ ಮಾಡುತ್ತಿದ್ದರೆ ಪುತ್ರ ವಿಯಾನ್ ಶೂಟಿಂಗ್ ಸೆಟ್ನಿಂದ ಹೊರನಿಂತು ತಾಯಿಯ ನೃತ್ಯದ ಹೆಜ್ಜೆಗಳನ್ನ ಅನುಕರಿಸಿದ್ದಾನೆ. ತಾಯಿ ಹಾಗೂ ಮಗನ ಈ ಜುಗಲ್ ಬಂಧಿಯನ್ನ ತಂದೆ ರಾಜ್ಕುಂದ್ರಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಕೆಲದಿನಗಳ ಹಿಂದಷ್ಟೇ ವಿಯಾನ್ ತನ್ನ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದ. ಪುತ್ರನ ಜನ್ಮದಿನದಂದು ಶಿಲ್ಪಾ ಒಂದು ಸುಂದರ ಸಂದೇಶವನ್ನ ಇನ್ಸ್ಟಾದಲ್ಲಿ ಶೇರ್ ಮಾಡಿದ್ದರು. ನೀನು ಈ ಹೊಸ ಜೀವನಕ್ಕೆ ಹೊಂದಿಕೊಂಡಿದ್ದು ಮಾತ್ರವಲ್ಲದೇ ಈ ಹೊಸ ಜೀವನ ಕ್ರಮದ ಬಗ್ಗೆ ಒಂದೇ ಒಂದು ದೂರನ್ನೂ ಹೊಂದಿಲ್ಲ. ನೀನಿಗ ಅಣ್ಣನ ಜವಾಬ್ದಾರಿಯನ್ನ ಅತ್ಯಂತ ಸುಂದರವಾಗಿ ನಿಭಾಯಿಸುತ್ತಿದ್ದೀಯಾ. ಈ ಲಾಕ್ಡೌನ್ ನಿನ್ನನ್ನ ತುಂಬಾ ಬೇಗನೆ ಪ್ರಬುದ್ಧನನ್ನಾಗಿ ಮಾಡಿದೆ. ನಾನೊಬ್ಬ ಹೆಮ್ಮೆಯ ತಾಯಿ ಎಂದು ಬರೆದುಕೊಂಡಿದ್ದರು.
https://www.instagram.com/p/CPXS-B-hPb7/?utm_source=ig_web_copy_link