
ಬಾಲಿವುಡ್ ಸಿನಿಮಾದ ಹಾಡುಗಳಿಗೆ ನೃತ್ಯ ಮಾಡಿದ ಸಾಕಷ್ಟು ವಿಡಿಯೋಗಳನ್ನ ಈಗಾಗಲೇ ರಿಕ್ಕಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇದರಲ್ಲಿ ಒಂದು ವಿಡಿಯೋ ಬಾಲಿವುಡ್ ನಟ ರಿತೇಶ್ ದೇಶಮುಖ್ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ರಿತೇಶ್ ದೇಶಮುಖ್ ಅಭಿನಯದ 2006ರಲ್ಲಿ ತೆರೆ ಕಂಡ ಅಪ್ನಾ ಸಪ್ನಾ ಮನಿ ಮನಿ ಸಿನಿಮಾದ ‘ದಿಲ್ ಮೇ ಬಜಿ ಗಿಟಾರ್ʼ ಎಂಬ ಹಾಡಿಗೆ ನೃತ್ಯ ಮಾಡಿರುವ ರಿಕಿ ವಿಡಿಯೋವನ್ನ ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಈ ವಿಡಿಯೋ ಎಷ್ಟರ ಮಟ್ಟಿಗೆ ವೈರಲ್ ಆಗಿದೆ ಅಂದ್ರೆ ಸ್ವತಃ ರಿತೇಶ್ ದೇಶಮುಖ್ ಈ ವಿಡಿಯೋ ಸಂಬಂಧ ಟ್ವೀಟ್ ಮಾಡಿದ್ದಾರೆ. ನನಗೆ ನಿಮಗೆ ನೃತ್ಯದ ವಿಡಿಯೋಗಳು ಅಂದರೆ ಇಷ್ಟ. ಈ ವಿಡಿಯೋ ಕೂಡ ಅದ್ಭುತವಾಗಿದೆ ಎಂದು ಬರೆದುಕೊಂಡಿದ್ದಾರೆ .