![US Comedian Re-posts Controversial Photo of Herself Holding Bloody, Severed Head of Trump Effigy](https://images.news18.com/ibnlive/uploads/2020/11/1604583067_kathy.jpeg)
ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ನಡೆಯುತ್ತಿರುವ ಬೆನ್ನಲ್ಲೇ ಅಮೆರಿಕನ್ನರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನ ಶೇರ್ ಮಾಡುತ್ತಿದ್ದಾರೆ. ಈ ಸಾಲಿಗೆ ಅಮೆರಿಕದ ಖ್ಯಾತ ಹಾಸ್ಯ ನಟಿ ಕ್ಯಾಥಿ ಗ್ರಿಫಿನ್ ಕೂಡ ಸೇರಿದ್ದಾರೆ .
ಎಮ್ಮಿ ಪ್ರಶಸ್ತಿ ಪುರಸ್ಕೃತ ಹಾಸ್ಯ ನಟಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಕತ್ತರಿಸಿದ ರಕ್ತಸಿಕ್ತ ತಲೆಯ ಕಲಾಕೃತಿ ಹಿಡಿದಿರುವ ಚಿತ್ರವನ್ನ ಪೋಸ್ಟ್ ಮಾಡಿದ್ದಾರೆ.
ಈ ರೀತಿಯ ಫೋಟೋ ಶೇರ್ ಮಾಡಿರುವುದಕ್ಕೆ ನನ್ನ ವಿರುದ್ಧ ರಹಸ್ಯ ಸೇವೆಯಿಂದ ತನಿಖೆ ನಡೆಯುತ್ತಿದೆ ಎಂದು ನಟಿ ಹೇಳಿಕೊಂಡಿದ್ದಾರೆ.
ಈ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 2017ರಲ್ಲೂ ಈ ಘೋರ ಚಿತ್ರ ಪೋಸ್ಟ್ ಮಾಡಿದ್ದ ಹಾಸ್ಯ ನಟಿ ಬಳಿಕ ತಮ್ಮ ವೃತ್ತಿಜೀವನವನ್ನೇ ಕುಂಠಿತಗೊಳಿಸಿಕೊಂಡಿದ್ದರು. ಇದೀಗ ಅಮೆರಿಕದಲ್ಲಿ ಚುನಾವಣಾ ಮತ ಎಣಿಕೆ ನಡೆಯುತ್ತಿದ್ದು ನಟಿ ಮತ್ತೊಮ್ಮೆ ಈ ಚಿತ್ರವನ್ನ ಪೋಸ್ಟ್ ಮಾಡಿದ್ದಾರೆ.
![](https://kannadadunia.com/wp-content/uploads/2020/11/60a89936-d3d1-44f8-b1f5-726d56eeb41c-1.jpg)