alex Certify ನಟಿ ಕಾರ್ ನಲ್ಲಿದ್ದ ಹ್ಯಾಂಡ್ ಬ್ಯಾಗ್ ಕಳ್ಳತನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಕಾರ್ ನಲ್ಲಿದ್ದ ಹ್ಯಾಂಡ್ ಬ್ಯಾಗ್ ಕಳ್ಳತನ

ಹುಟ್ಟುಹಬ್ಬದ ಕೇಕ್ ವಿಷ್ಯದಲ್ಲಿ ಟ್ರೋಲ್ ಆಗಿದ್ದ ನಟಿ ನಿಯಾ ಶರ್ಮಾ ಮತ್ತೆ ಸುದ್ದಿಯಲ್ಲಿದ್ದಾಳೆ. ನಿಯಾ ಶರ್ಮಾ ಮೇಲೆ ಕಳ್ಳರು ಕಣ್ಣು ಹಾಕಿದ್ದಾರೆ. ಕಿರುತೆರೆ ನಟಿ ನಿಯಾ ಶರ್ಮಾ ಹ್ಯಾಂಡ್ ಬ್ಯಾಗ್ ಕಳ್ಳತನವಾಗಿದೆ. ಕಾರ್ ನಲ್ಲಿದ್ದ ಬ್ಯಾಗನ್ನು ಕಳ್ಳರು ಕದ್ದೊಯ್ದಿದ್ದಾರೆ.

ನಾಗಿನ್-4 ಧಾರವಾಹಿ ನಟಿ ನಿಯಾ, ಟ್ವಿಟರ್ ಮೂಲಕ ಪೊಲೀಸರ ಸಹಾಯ ಕೇಳಿದ್ದಾಳೆ. ಇದಕ್ಕೆ ಪೊಲೀಸರು ತಕ್ಷಣ ಪ್ರತಿಕ್ರಿಯೆ ನೀಡಿದ್ದು, ಖುಷಿ ತಂದಿದೆ ಎಂದು ನಿಯಾ ಹೇಳಿದ್ದಾಳೆ. ಮುಂಬೈನ ಲೋವರ್ ಪ್ಯಾರೆಲ್ ಪ್ರದೇಶದಲ್ಲಿ ಕಾರ್ ನಲ್ಲಿದ್ದ ಹ್ಯಾಂಡ್ ಬ್ಯಾಗ್ ಕಳ್ಳತನವಾಗಿದೆ ಎಂದು ನಿಯಾ ಟ್ವೀಟ್ ಮಾಡಿದ್ದಾಳೆ.

ನಂಬರ್ ಗೆ ಫೋನ್ ಮಾಡಿ ಮಾಹಿತಿ ನೀಡುವಂತೆ ಮುಂಬೈ ಪೊಲೀಸರು ನಿಯಾ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. ಪೊಲೀಸರನ್ನು ಶೀಘ್ರವೇ ಸಂಪರ್ಕಿಸಿ ದೂರು ನೀಡುವುದಾಗಿ ನಿಯಾ ಹೇಳಿದ್ದಾರೆ. ಹಾಗೆ ಮುಂಬೈ ಪೊಲೀಸರಿಗೆ ಧನ್ಯವಾದ ಹೇಳಿದ್ದಾರೆ.

ಕಳೆದ ತಿಂಗಳು ನಿಯಾ 30ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದಂದು ನಿಯಾ ಕೇಕ್ ಸುದ್ದಿಯಲ್ಲಿತ್ತು. ಅನೇಕರು ಟ್ರೋಲ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ನಿಯಾ, ಸಾಮಾಜಿಕ ಜಾಲತಾಣದಲ್ಲಿ ಬರುವ ಕಮೆಂಟ್ ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಳು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...