ಕೋವಿಡ್ನಿಂದ ನಿಧನರಾದ ಹಿಂದಿ ಕಿರುತರೆ ನಟಿ ದಿವ್ಯಾ ಭಟ್ನಾಗರ್ ಅಗಲಿಕೆಗೆ ತಾರೆಯರು ಕಂಬನಿ ಮಿಡಿದಿದ್ದಾರೆ. ಮುಂಬೈನ ಸೆವೆನ್ ಹಿಲ್ಸ್ ಆಸ್ಪತ್ರೆಗೆ ದಾಖಲಾಗಿದ್ದ 34 ವರ್ಷದ ದಿವ್ಯಾರನ್ನ ವೆಂಟಿಲೇಟರ್ನಲ್ಲಿ ಇರಿಸಲಾಗಿತ್ತು. ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ದಿವ್ಯಾ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.
ನವೆಂಬರ್ 26 ರಂದು ದಿವ್ಯಾರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನ್ಯುಮೋನಿಯಾದಿಂದ ಬಳಲುತ್ತಿದ್ದ ದಿವ್ಯಾರನ್ನ ವೆಂಟಿಲೇಟರ್ನಲ್ಲಿ ಇರಿಸಲಾಗಿತ್ತು.
ದಿವ್ಯಾ ಭಟ್ನಾಗರ್ ನಿಧನಕ್ಕೆ ಸಂತಾಪ ಸೂಚಿಸಿ ನಟಿ ದೆಬೊಲಿನಾ ಭಟ್ಟಾಜಾರ್ಜಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಭಾವನಾತ್ಮಕ ಕ್ಯಾಪ್ಶನ್ ನೀಡಿ ಅಗಲಿದ ನಟಿಗೆ ಅಂತಿಮ ನಮನ ಕೋರಿದ್ರು. ಶಿಲ್ಪಾ ಶಿರೋಡ್ಕರ್ ಕೂಡ ದಿವ್ಯಾ ಜೊತೆಗಿನ ಫೋಟೋ ಶೇರ್ ಮಾಡಿ ಆರ್ಐಪಿ ಎಂದು ಬರೆದುಕೊಂಡಿದ್ದಾರೆ. ದಿವ್ಯಾ ವಿವಾಹ ಸಂಬಂಧವನ್ನ ಮುರಿದುಕೊಂಡಿದ್ದರು. ಇದಾದ ಬಳಿಕ ಅವರು ಸಾಕಷ್ಟು ಒತ್ತಡದಲ್ಲಿದ್ದರು. ಕಳೆದ ವರ್ಷ ಡಿಸೆಂಬರ್ನಲ್ಲಿ ಗಗನ್ ಎಂಬವರ ಜೊತೆ ದಿವ್ಯಾ ವಿವಾಹವಾಗಿತ್ತು. ಆದರೆ ಗಗನ್ ದಿವ್ಯಾರನ್ನ ತೊರೆದಿದ್ದರಿಂದ ಒಬ್ಬಂಟಿಯಾಗಿದ್ದರು.
ದಿವ್ಯಾ ಭಟ್ನಾಗರ್ ‘ತೇರಾ ಯಾರ್ ಹೂ’ ಎಂಬ ಹಾಸ್ಯ ಕಾರ್ಯಕ್ರಮದ ಶೂಟಿಂಗ್ನಲ್ಲಿದ್ದಾಗ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ‘ಯೇ ರಿಶ್ತಾ ಕ್ಯಾ ಕೆಹಲಾತಾ ಹೈ’, ‘ಸಂಸ್ಕಾರ್’, ‘ಉಢಾನ್’, ‘ಜೀತ್ ಗಯಿ ತೋ ಪಿಯಾ ಮೋರೆ’ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.