alex Certify ವಿಶ್ವ ಸುಂದರಿ ಐಶ್ವರ್ಯಾ ರೈ ಸರಳತೆಗೆ ಬೆರಗಾದ ಅಭಿಮಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವ ಸುಂದರಿ ಐಶ್ವರ್ಯಾ ರೈ ಸರಳತೆಗೆ ಬೆರಗಾದ ಅಭಿಮಾನಿಗಳು

ನಡೆದು ಬಂದ ದಾರಿ, ಹುಟ್ಟಿದ ಊರು, ನಮ್ಮ ಸಂಸ್ಕೃತಿಯನ್ನು ಮರೆಯಬಾರದು ಎಂದು ಹಿರಿಯರು ಹೇಳುತ್ತಲೇ ಇರುತ್ತಾರೆ. ಎಷ್ಟೇ ದೊಡ್ಡ ಸ್ಥಾನಕ್ಕೆ ಹೋದರೂ ಹತ್ತಿಬಂದ ಏಣಿಯನ್ನು ಒದೆಯಬಾರದು ಎಂಬುದನ್ನು ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಸಾಬೀತು ಮಾಡಿದ್ದಾರೆ.

ಅವರು 1994ರಲ್ಲಿ ವಿಶ್ವ ಸುಂದರಿಯಾಗಿ ಆಯ್ಕೆಯಾದ ಬಳಿಕ ಅವರನ್ನು ಟಚ್ ಮಾಡುವುದುಂಟೇ? ಹೀಗಿದ್ದರೂ ಯಾವುದೋ ಕಾರ್ಯಕ್ರಮವೊಂದರಲ್ಲಿ ವಿಶ್ವ ಸುಂದರಿಯ ಕಿರೀಟ ಹಾಗೂ ಹೆಗಲು ಪಟ್ಟಿಯನ್ನು ಧರಿಸಿಯೇ ನೆಲದ ಮೇಲೆ ಅಮ್ಮನ ಪಕ್ಕ ಕುಳಿತು ಊಟ ಮಾಡುತ್ತಿರುವ ಫೋಟೋ ವೈರಲ್ ಆಗಿದೆ.

ಈ ಫೋಟೋಗೆ ನೆಟ್ಟಿಗರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದ್ದು, ಸುಂದರಿ ಎಷ್ಟು ಸರಳ ಎಂದು ಹೊಗಳುತ್ತಿದ್ದಾರೆ. ವಿನಮ್ರ ರಾಣಿ ಎಂದು ಒಬ್ಬ ಕರೆದರೆ, ಊಟವನ್ನೂ ಎಷ್ಟೊಂದು ಆಕರ್ಷಕವಾಗಿ ಮಾಡುತ್ತಾರೆಂದು ಮಗದೊಬ್ಬ ಕಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...