
61 ವರ್ಷದ ನಟಿ ಇದೀಗ ಇನ್ಸ್ಟಾಗ್ರಾಂನಲ್ಲಿ ಹೊಸ ಪೋಸ್ಟ್ ಒಂದನ್ನ ಶೇರ್ ಮಾಡಿದ್ದು ಇದರಲ್ಲಿ ನೀನಾ ದಕ್ಷಿಣ ಭಾರತದ ರವಾ ಪಡ್ಡನ್ನ ಮಾಡಿ ತೋರಿಸಿದ್ದಾರೆ.
ರವೆಯಲ್ಲಿ ಅಗಾಧ ಪ್ರಮಾಣದ ಪ್ರೋಟಿನ್ ಹಾಗೂ ಫೈಬರ್ ಇದ್ದು ಇದೊಂದು ಅತ್ಯಂತ ಆರೋಗ್ಯಯುತ ಆಹಾರ ಪದಾರ್ಥವಾಗಿದೆ.
ಪಡ್ಡನ್ನ ಹೆಚ್ಚಾಗಿ ಉಳಿದ ಇಡ್ಲಿ ಅಥವಾ ದೋಸೆ ಹಿಟ್ಟನ್ನ ಬಳಸಿ ಮಾಡಬಹುದಾಗಿದೆ. ಸಂಜೆ ಚಹದ ಸಮಯದಲ್ಲಿ ಸೇವಿಸೋಕೆ ಇದೊಂದು ಅತ್ಯಂತ ಆರೋಗ್ಯಯುತವಾಗಿ ಸ್ನ್ಯಾಕ್ಸ್ ಆಗಿದೆ.
ಈ ಹಿಂದೆ ವಿಡಿಯೋವೊಂದನ್ನ ಶೇರ್ ಮಾಡಿದ್ದ ನೀನಾ ಗುಪ್ತಾ ಭಾರತೀಯ ಮಹಿಳೆಯರಿಗೆ ಅಡುಗೆ ವಿಚಾರದಲ್ಲಿ ಉತ್ತಮ ಸಲಹೆಯೊಂದನ್ನ ನೀಡಿದ್ದಾರೆ. ಮಹಿಳೆಯರಿಗೂ ಅವರಿಷ್ಟದ ಖಾದ್ಯಗಳನ್ನ ತಯಾರಿಸಿ ತಿನ್ನುವಂತಹ ಅಧಿಕಾರ ಇದೆ. ಭಾರತದಲ್ಲಿ ಬಹುತೇಕ ಮಹಿಳೆಯರು ತಮ್ಮ ಮಕ್ಕಳು ಹಾಗೂ ಕುಟುಂಬಸ್ಥರಿಗೆ ಇಷ್ಟವಾಗುವ ಖಾದ್ಯ ತಯಾರಿಸೋದ್ರಲ್ಲೇ ಮಗ್ನರಾಗಿರ್ತಾರೆ. ಹೀಗಾಗಿ ಮಹಿಳೆಯರು ಅವರಿಷ್ಟದ ತಿಂಡಿಯನ್ನ ಮಾಡಿ ತಿನ್ನೋದು ತುಂಬಾನೇ ಅಪರೂಪವಾಗಿದೆ ಎಂದು ಹೇಳಿದ್ರು.
ನೀನಾ ಗುಪ್ತಾರ ಮುಂಬರುವ ಸಿನಿಮಾ ಸರ್ದಾರ್ ಕಾ ಗ್ರ್ಯಾಂಡ್ಸನ್ ನೆಟ್ಫ್ಲಿಕ್ಸ್ನಲ್ಲಿ ಮೇ 18ರಂದು ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ನಟಿ ನೀನಾ ವೃದ್ಧೆಯ ಪಾತ್ರವನ್ನ ನಿರ್ವಹಿಸಿದ್ದಾರೆ.