alex Certify ದಕ್ಷಿಣ ಭಾರತದ ಪ್ರಸಿದ್ಧ ರೆಸಿಪಿಯನ್ನ ಹಂಚಿಕೊಂಡ ಬಾಲಿವುಡ್ ಖ್ಯಾತ ನಟಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಕ್ಷಿಣ ಭಾರತದ ಪ್ರಸಿದ್ಧ ರೆಸಿಪಿಯನ್ನ ಹಂಚಿಕೊಂಡ ಬಾಲಿವುಡ್ ಖ್ಯಾತ ನಟಿ….!

ತಮ್ಮ ಮುಂಬರುವ ಸಿನಿಮಾ ಸರ್ದಾರ್​ ಕಾ ಗ್ರ್ಯಾಂಡ್​ಸನ್​​​ ರಿಲೀಸ್​ಗೆ ಕಾಯುತ್ತಿರೋ ಹಿರಿಯ ನಟಿ ನೀನಾ ಗುಪ್ತಾ ಸದ್ಯ ತಮ್ಮ ಅಡುಗೆ ಮನೆಯಲ್ಲಿ ಬ್ಯುಸಿಯಾಗಿದ್ದಾರೆ. ಮನೆಯಲ್ಲೇ ಇದ್ದು ಸುರಕ್ಷಿತವಾಗಿರಬೇಕಾದ ಈ ಸಮಯದಲ್ಲಿ ಈ ರೀತಿಯಲ್ಲಿ ಚಟುವಟಿಕೆಗಳಲ್ಲಿ ಭಾಗಿಯಾಗೋದು ನಿಜಕ್ಕೂ ಒಂದು ಒಳ್ಳೆಯ ಸಂಗತಿಯಾಗಿದೆ.

61 ವರ್ಷದ ನಟಿ ಇದೀಗ ಇನ್​ಸ್ಟಾಗ್ರಾಂನಲ್ಲಿ ಹೊಸ ಪೋಸ್ಟ್​ ಒಂದನ್ನ ಶೇರ್​ ಮಾಡಿದ್ದು ಇದರಲ್ಲಿ ನೀನಾ ದಕ್ಷಿಣ ಭಾರತದ ರವಾ ಪಡ್ಡನ್ನ ಮಾಡಿ ತೋರಿಸಿದ್ದಾರೆ.

ರವೆಯಲ್ಲಿ ಅಗಾಧ ಪ್ರಮಾಣದ ಪ್ರೋಟಿನ್​ ಹಾಗೂ ಫೈಬರ್​ ಇದ್ದು ಇದೊಂದು ಅತ್ಯಂತ ಆರೋಗ್ಯಯುತ ಆಹಾರ ಪದಾರ್ಥವಾಗಿದೆ.
ಪಡ್ಡನ್ನ ಹೆಚ್ಚಾಗಿ ಉಳಿದ ಇಡ್ಲಿ ಅಥವಾ ದೋಸೆ ಹಿಟ್ಟನ್ನ ಬಳಸಿ ಮಾಡಬಹುದಾಗಿದೆ. ಸಂಜೆ ಚಹದ ಸಮಯದಲ್ಲಿ ಸೇವಿಸೋಕೆ ಇದೊಂದು ಅತ್ಯಂತ ಆರೋಗ್ಯಯುತವಾಗಿ ಸ್ನ್ಯಾಕ್ಸ್ ಆಗಿದೆ.

ಈ ಹಿಂದೆ ವಿಡಿಯೋವೊಂದನ್ನ ಶೇರ್​ ಮಾಡಿದ್ದ ನೀನಾ ಗುಪ್ತಾ ಭಾರತೀಯ ಮಹಿಳೆಯರಿಗೆ ಅಡುಗೆ ವಿಚಾರದಲ್ಲಿ ಉತ್ತಮ ಸಲಹೆಯೊಂದನ್ನ ನೀಡಿದ್ದಾರೆ. ಮಹಿಳೆಯರಿಗೂ ಅವರಿಷ್ಟದ ಖಾದ್ಯಗಳನ್ನ ತಯಾರಿಸಿ ತಿನ್ನುವಂತಹ ಅಧಿಕಾರ ಇದೆ. ಭಾರತದಲ್ಲಿ ಬಹುತೇಕ ಮಹಿಳೆಯರು ತಮ್ಮ ಮಕ್ಕಳು ಹಾಗೂ ಕುಟುಂಬಸ್ಥರಿಗೆ ಇಷ್ಟವಾಗುವ ಖಾದ್ಯ ತಯಾರಿಸೋದ್ರಲ್ಲೇ ಮಗ್ನರಾಗಿರ್ತಾರೆ. ಹೀಗಾಗಿ ಮಹಿಳೆಯರು ಅವರಿಷ್ಟದ ತಿಂಡಿಯನ್ನ ಮಾಡಿ ತಿನ್ನೋದು ತುಂಬಾನೇ ಅಪರೂಪವಾಗಿದೆ ಎಂದು ಹೇಳಿದ್ರು.

ನೀನಾ ಗುಪ್ತಾರ ಮುಂಬರುವ ಸಿನಿಮಾ ಸರ್ದಾರ್​ ಕಾ ಗ್ರ್ಯಾಂಡ್​ಸನ್​ ನೆಟ್​ಫ್ಲಿಕ್ಸ್​​ನಲ್ಲಿ ಮೇ 18ರಂದು ರಿಲೀಸ್​ ಆಗಲಿದೆ. ಈ ಸಿನಿಮಾದಲ್ಲಿ ನಟಿ ನೀನಾ ವೃದ್ಧೆಯ ಪಾತ್ರವನ್ನ ನಿರ್ವಹಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...