ಏಪ್ರಿಲ್ 29 ರಂದು ವಿಶ್ವಾದ್ಯಂತ ನೃತ್ಯ ದಿನವನ್ನ ಆಚರಿಸಲಾಗಿದೆ. ಅಂತಾರಾಷ್ಟ್ರೀಯ ನೃತ್ಯ ದಿನವನ್ನ 1982ರಲ್ಲಿ ಯುನೆಸ್ಕೋದ ಇಂಟರ್ನ್ಯಾಷನಲ್ ಥಿಯೇಟರ್ ಇನ್ಸ್ಟಿಟ್ಯೂಟ್ ನೃತ್ಯ ಸಮಿತಿ ಆರಂಭಿಸಿತು. ಆಧುನಿಕ ಬ್ಯಾಲೆ ಸೃಷ್ಟಿಕರ್ತ ಜೀನ್ ಜಾರ್ಜಸ್ ನೊವರ್ರೆ ಜನ್ಮದಿನದ ಸವಿನೆನಪಿಗೆ ಪ್ರತಿ ವರ್ಷ ಏಪ್ರಿಲ್ 29ರಂದು ವಿಶ್ವಾದ್ಯಂತ ನೃತ್ಯ ದಿನವನ್ನ ಆಚರಿಸಲಾಗುತ್ತದೆ.
ರಾಜಕೀಯ, ಸಾಂಸ್ಕೃತಿಕ ಹಾಗೂ ಜನಾಂಗೀಯ ಎಲ್ಲೆಗಳನ್ನ ಮೀರಿದ ನೃತ್ಯದ ಮಹತ್ವವನ್ನ ವಿಶ್ವಕ್ಕೆ ಸಾರುವ ಸಲುವಾಗಿ ಈ ದಿನವನ್ನ ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ನೃತ್ಯ ದಿನದ ಪ್ರಯುಕ್ತ ಬಾಲಿವುಡ್ನಲ್ಲಿ ಫೇಮಸ್ ಆದ ಕೆಲ ಪ್ರಸಿದ್ಧ ನೃತ್ಯಗಳು ಇಲ್ಲಿವೆ,
ಚಯ್ಯಾ ಚಯ್ಯಾ : 1998ರಲ್ಲಿ ತೆರೆ ಕಂಡ ಬಾಲಿವುಡ್ ಸಿನಿಮಾ ʼದಿಲ್ ಸೇʼ ಚಯ್ಯಾ ಚಯ್ಯಾ ಹಾಡು ಹಾಗೂ ನೃತ್ಯ ಈಗಲೂ ಪ್ರಸಿದ್ಧಿ ಪಡೆದಿದೆ. ಸುಖ್ವಿಂದರ್ ಸಿಂಗ್ ಹಾಡಿರುವ ಈ ಹಾಡಿನಲ್ಲಿ ಶಾರೂಖ್ ಖಾನ್ ಹಾಗೂ ಮಲೈಕಾ ಅರೋರಾ ಅದ್ಭುತ ಪ್ರದರ್ಶನ ನೀಡಿದ್ದಾರೆ.
ಎಕ್ ಪಲ್ ಕಾ ಜೀನಾ : ಈ ಹಾಡಂತೂ 90ರ ದಶಕದಲ್ಲಿ ಬಾಲ್ಯ ಕಳೆದ ಪ್ರತಿಯೊಬ್ಬರು ಭಾರೀ ಇಷ್ಟವಾಗುವ ಹಾಡು ಹಾಗೂ ನೃತ್ಯ. 2000ದಲ್ಲಿ ತೆರೆ ಕಂಡ ಕಹೋ ನಾ ಪ್ಯಾರ್ ಹೈ ಸಿನಿಮಾದ ಹಾಡಾಗಿದೆ. ಈ ಹಾಡಿಗೆ ಹೃತಿಕ್ ರೋಷನ್ ತಮ್ಮ ನೃತ್ಯದ ಮೂಲಕ ಜಾದೂ ಮಾಡಿದ್ದಾರೆ.
ಹುಡ್ ಹುಡ್ ದಬಂಗ್ : 2010ರಲ್ಲಿ ತೆರೆಕಂಡ ದಬಂಗ್ ಸಿನಿಮಾದ ಈ ಹಾಡಿಗೆ ಸಲ್ಮಾನ್ ಖಾನ್ ಮಾಡಿದ್ದ ನೃತ್ಯ ಟ್ರೆಂಡ್ ಕ್ರಿಯೇಟ್ ಮಾಡಿತ್ತು.
ಲುಂಗಿ ಡ್ಯಾನ್ಸ್ : ರೋಹಿತ್ ಶೆಟ್ಟಿ ನಿರ್ಮಾಣದ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಚೆನ್ನೈ ಎಕ್ಸ್ಪ್ರೆಸ್ ಸಿನಿಮಾದ ಈ ಹಾಡಿಗೂ ಇಂದಿಗೂ ಅನೇಕರ ಹಾಟ್ ಫೇವರಿಟ್. ಈ ಹಾಡನ್ನ ಹನಿ ಸಿಂಗ್ ಹಾಡಿದ್ದರೆ, ಶಾರೂಕ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಸಖತ್ ನೃತ್ಯ ಮಾಡಿದ್ದಾರೆ.
https://youtu.be/0v1It89cKxY
https://youtu.be/hI2NjF6dpao