alex Certify ಸಿನಿಮಾ ರಿಲೀಸ್​ಗೂ ಮುನ್ನ ಸಂತಸ ಹೊರಹಾಕಿದ ಶಕೀಲಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿನಿಮಾ ರಿಲೀಸ್​ಗೂ ಮುನ್ನ ಸಂತಸ ಹೊರಹಾಕಿದ ಶಕೀಲಾ

ಕೆಲವೊಂದು ವ್ಯಕ್ತಿತ್ವಗಳೇ ಹಾಗೆ. ನೀವು ಅವರನ್ನ ಬೇಕಿದ್ದರೆ ಇಷ್ಟ ಪಡದೇ ಇರಬಹುದು. ಆದರೆ ಮರೆಯೋಕಂತೂ ಸಾಧ್ಯವೇ ಇಲ್ಲ. ಚಿತ್ರರಂಗದಲ್ಲಿ ಅಭಿಮಾನಿಗಳಿಗೆ ಈ ರೀತಿಯ ಭಾವನೆ ಮೂಡಿಸಿದ ಕಲಾವಿದರ ಪೈಕಿ ಶಕೀಲಾ ಕೂಡ ಒಬ್ಬರು.

ಶಕೀಲಾ ಜೀವನ ಆಧಾರಿತ ಸಿನಿಮಾ ಶುಕ್ರವಾರ ತೆರೆಕಾಣಲಿದೆ. ರಿಚಾ ಚಡ್ಡಾ ಹಾಗೂ ಪಂಕಜ್​ ತ್ರಿಪಾಠಿ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾ ಈಗಾಗಲೇ ಚಿತ್ರೀಕರಣದ ಮೂಲಕವೇ ಸಾಕಷ್ಟು ಬಾರಿ ಸುದ್ದಿ ಮಾಡಿತ್ತು. ಡೆಕ್ಕನ್​ ಹೆರಾಲ್ಡ್​ನ ರೇಡಿಯೋ ಶೋನಲ್ಲಿ ಭಾಗಿಯಾದ ಶಕೀಲಾ ಸಿನಿಮಾದ ಬಗ್ಗೆ ತಮ್ಮ ಸಿನಿ ಜೀವನದ ಬಗ್ಗೆ ಸಾಕಷ್ಟು ಮಾತುಗಳನ್ನ ಆಡಿದ್ದಾರೆ.

ನಾಳೆ ತೆರೆಕಾಣಲಿರುವ ಸಿನಿಮಾದ ಬಗ್ಗೆ ಮಾತನಾಡಿದ ಶಕೀಲಾ, ಸಿನಿಮಾದ ಕೆಲ ಕ್ಲಿಪ್​ಗಳನ್ನ ನೋಡುತ್ತಿದ್ದಂತೆಯೇ ಅದು ನನ್ನನ್ನ ಕೆಲ ವರ್ಷಗಳ ಹಿಂದಿನ ನೆನಪನ್ನ ಹಸಿಯಾಗಿಸಿತು. ಅದರಲ್ಲೂ ತಮಿಳು ಭಾಷೆಯಲ್ಲಿ ನೋಡಿದಾಗ ನನಗೆ ಸಾಕಷ್ಟು ನೆನಪುಗಳನ್ನ ಈ ಸಿನಿಮಾ ಹೊತ್ತು ತಂದಿದೆ ಎಂದೆನಿಸಿದೆ ಎಂದಿದ್ದಾರೆ.

ಅಲ್ಲದೇ ಕನ್ನಡ ಚಿತ್ರರಂಗದ ಬಗ್ಗೆಯೂ ಮಾತನಾಡಿರುವ ಶಕೀಲಾ, ಕನ್ನಡ ಬಿಗ್​ಬಾಸ್​ನಲ್ಲಿ ತಾವಿದ್ದ ದಿನಗಳನ್ನ ನೆನೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...