ಈಗ ಸೋಶಿಯಲ್ ಮೀಡಿಯಾದಲ್ಲಿ ನೀವು ಕೇವಲ ಮನರಂಜನೆಯನ್ನ ಪಡೆಯೋದು ಮಾತ್ರವಲ್ಲದೇ ಹಣವನ್ನೂ ಗಳಿಸಬಹುದಾಗಿದೆ. ಕಳೆದ 5 ವರ್ಷಗಳಲ್ಲಿ ಇನ್ಫ್ಲುಯೆನ್ಸರ್ ಮಾರ್ಕೆಟಿಂಗ್ ಕೆಲಸವು ಅನೇಕರಿಗೆ ಆದಾಯದ ಮೂಲವಾಗಿ ಬದಲಾಗಿದೆ.
ಟ್ವಿಟರ್, ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ ವಿವಿಧ ತೆರನಾದ ಇನ್ಫ್ಲುಯೆನ್ಸರ್ಗಳು ನಿಮಗೆ ಸಿಗುತ್ತಾರೆ. ಇವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಿನ ಫಾಲೋವರ್ಸ್ ಹೊಂದಿದ್ದು ಹಣಕ್ಕಾಗಿ ವಿವಿಧ ಬ್ರ್ಯಾಂಡ್ಗಳ ಉತ್ಪನ್ನಗಳನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪ್ರಚಾರ ಮಾಡುತ್ತಾರೆ.
‘ತೌಕ್ತೆ’ ಚಂಡಮಾರುತದಿಂದ ತತ್ತರಿಸಿದ ಬೆನ್ನಲ್ಲೇ ಮತ್ತೊಂದು ಶಾಕ್: ‘ಯಾಸ್’ ಸೈಕ್ಲೋನ್ ಆತಂಕ
ಚೀನಾ ಮೂಲದ ಅಪ್ಲಿಕೇಶನ್ ಟಿಕ್ಟಾಕ್ ಕೂಡ ಇಂತಹದ್ದೇ ಒಂದು ಮಾಧ್ಯಮವಾಗಿದ್ದು ಅನೇಕರಿಗೆ ಆದಾಯದ ಮೂಲವಾಗಿದೆ.
ಇಂಗ್ಲೆಂಡ್ನ 17 ವರ್ಷದ ಆಲಿಷಿಯಾ ಬ್ರೂಸರ್ ಎಂಬಾಕೆ ಕಳೆದ ವರ್ಷ ಟೈಮ್ ಪಾಸ್ ಮಾಡೋದಕ್ಕಾಗಿ ಟಿಕ್ಟಾಕ್ ಅಪ್ಲಿಕೇಶನ್ನ್ನು ಡೌನ್ಲೋಡ್ ಮಾಡಿದ್ದರು. ಅಲ್ಲದೇ ಇದರಲ್ಲಿ ಒಂದೊಂದೇ ವಿಡಿಯೋವನ್ನ ಹರಿಬಿಡಲು ಆರಂಭಿಸಿದ್ರು, ಆದರೆ ಇದೀಗ ದಿನಕ್ಕೆ ಲಕ್ಷಾಂತರ ರೂಪಾಯಿಯನ್ನ ಈ ಅಪ್ಲಿಕೇಶನ್ನಿಂದ ಗಳಿಸುತ್ತಿರೋದಾಗಿ ಹೇಳಿದ್ದಾರೆ. ಪ್ರತಿಷ್ಠಿತ ಬ್ರ್ಯಾಂಡ್ಗಳ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದು ದಿನಕ್ಕೆ ಮಿಲಿಯನ್ಗಟ್ಟಲೇ ಹಣವನ್ನ ಗಳಿಸುತ್ತಿದ್ದಾರಂತೆ.