alex Certify ಇನ್​ಸ್ಟಾಗ್ರಾಂ ಪೋಸ್ಟ್ ಮೂಲಕ ಪಡ್ಡೆ ಹುಡುಗರ ಮನಗೆದ್ದ ತನುಶ್ರೀ ದತ್ತಾ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್​ಸ್ಟಾಗ್ರಾಂ ಪೋಸ್ಟ್ ಮೂಲಕ ಪಡ್ಡೆ ಹುಡುಗರ ಮನಗೆದ್ದ ತನುಶ್ರೀ ದತ್ತಾ….!

ಸಿನಿರಂಗದಿಂದ ಕೆಲ ಕಾಲದಿಂದ ದೂರವೇ ಉಳಿದಿದ್ದ ತನುಶ್ರೀ ದತ್ತಾ ಇದೀಗ ಮತ್ತೆ ಜನತೆಯ ಕಣ್ಮುಂದೆ ಕಾಣಿಸಿಕೊಳ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಶೇಷವಾಗಿ ಇನ್​ಸ್ಟಾಗ್ರಾಂನಲ್ಲಿ ತರಹೇವಾರಿ ಪೋಸ್ಟ್​ಗಳ ಮೂಲಕ ನೆಟ್ಟಿಗರನ್ನ ರಂಜಿಸುತ್ತಿದ್ದಾಳೆ. ಸಾಕಷ್ಟು ಕಸರತ್ತುಗಳ ಮೂಲಕ ತನುಶ್ರೀ ದತ್ತಾ ಸಖತ್​ ಫಿಟ್​ & ಫೈನ್​​ ಆಗುವಲ್ಲಿ ಯಶಸ್ವಿಯಾಗಿದ್ದಾರೆ.

ಕೆಲ ದಿನಗಳ ಹಿಂದೆ ತನುಶ್ರೀ ಇನ್​ಸ್ಟಾಗ್ರಾಂನಲ್ಲಿ ತಮ್ಮ ವಿಡಿಯೋವೊಂದನ್ನ ಶೇರ್​ ಮಾಡಿದ್ದಾರೆ. ಡೋಂಟ್​ ರಶ್​ ಚಾಲೆಂಜ್​​ನ್ನು ತನ್ನದೇ ಆದ ರೀತಿಯಲ್ಲಿ ಪ್ರದರ್ಶಿಸಿದ್ದಾರೆ. ಹೊಸ ಅವತಾರದಲ್ಲಿ ತನುಶ್ರೀ ದತ್ತಾ ಸಖತ್​ ಹಾಟ್​ ಆಗಿ ಕಾಣ್ತಿದ್ದಾರೆ.
ಈಕೆಯ ಅಂದವನ್ನ ನೋಡಿದ ನೆಟ್ಟಿಗರೊಬ್ಬರು ಕಮೆಂಟ್​ನಲ್ಲಿ. 2000ನೇ ವರ್ಷದ ಕ್ರಶ್​ ವಾಪಸ್ಸಾಗಿದ್ದಾರೆ ಎಂದು ಬರೆದಿದ್ದಾರೆ. ಇನ್ನೊಬ್ಬರು ನಿಮ್ಮನ್ನ ಈ ರೀತಿ ಜಾಲಿ ಮೂಡ್​ನಲ್ಲಿ ನೋಡೋಕೆ ತುಂಬಾನೇ ಖುಷಿ ಎನಿಸುತ್ತಿದೆ. ನಮ್ಮ ಹೃದಯಕ್ಕೆ ನಶೆ ಏರಿಸೋ ಮಹಿಳೆ ವಾಪಸ್ಸಾಗಿದ್ದಾಳೆ ಎಂದು ಕಮೆಂಟ್​ ಹಾಕಿದ್ದಾರೆ.

ತನುಶ್ರೀ ದತ್ತಾ 2005ರಲ್ಲಿ ಆಶಿಕ್​ ಬನಾಯಾ ಆಪ್​ನೇ ಸಿನಿಮಾ ಮೂಲಕ ಬಾಲಿವುಡ್​ಗೆ ಪಾದಾರ್ಪಣೆ ಮಾಡಿದ್ದರು. ಈಕೆ ಕೊನೆಯದಾಗಿ ಅಪಾರ್ಟ್​ಮೆಂಟ್​ ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...