ಸಿನಿರಂಗದಿಂದ ಕೆಲ ಕಾಲದಿಂದ ದೂರವೇ ಉಳಿದಿದ್ದ ತನುಶ್ರೀ ದತ್ತಾ ಇದೀಗ ಮತ್ತೆ ಜನತೆಯ ಕಣ್ಮುಂದೆ ಕಾಣಿಸಿಕೊಳ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಶೇಷವಾಗಿ ಇನ್ಸ್ಟಾಗ್ರಾಂನಲ್ಲಿ ತರಹೇವಾರಿ ಪೋಸ್ಟ್ಗಳ ಮೂಲಕ ನೆಟ್ಟಿಗರನ್ನ ರಂಜಿಸುತ್ತಿದ್ದಾಳೆ. ಸಾಕಷ್ಟು ಕಸರತ್ತುಗಳ ಮೂಲಕ ತನುಶ್ರೀ ದತ್ತಾ ಸಖತ್ ಫಿಟ್ & ಫೈನ್ ಆಗುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಲ ದಿನಗಳ ಹಿಂದೆ ತನುಶ್ರೀ ಇನ್ಸ್ಟಾಗ್ರಾಂನಲ್ಲಿ ತಮ್ಮ ವಿಡಿಯೋವೊಂದನ್ನ ಶೇರ್ ಮಾಡಿದ್ದಾರೆ. ಡೋಂಟ್ ರಶ್ ಚಾಲೆಂಜ್ನ್ನು ತನ್ನದೇ ಆದ ರೀತಿಯಲ್ಲಿ ಪ್ರದರ್ಶಿಸಿದ್ದಾರೆ. ಹೊಸ ಅವತಾರದಲ್ಲಿ ತನುಶ್ರೀ ದತ್ತಾ ಸಖತ್ ಹಾಟ್ ಆಗಿ ಕಾಣ್ತಿದ್ದಾರೆ.
ಈಕೆಯ ಅಂದವನ್ನ ನೋಡಿದ ನೆಟ್ಟಿಗರೊಬ್ಬರು ಕಮೆಂಟ್ನಲ್ಲಿ. 2000ನೇ ವರ್ಷದ ಕ್ರಶ್ ವಾಪಸ್ಸಾಗಿದ್ದಾರೆ ಎಂದು ಬರೆದಿದ್ದಾರೆ. ಇನ್ನೊಬ್ಬರು ನಿಮ್ಮನ್ನ ಈ ರೀತಿ ಜಾಲಿ ಮೂಡ್ನಲ್ಲಿ ನೋಡೋಕೆ ತುಂಬಾನೇ ಖುಷಿ ಎನಿಸುತ್ತಿದೆ. ನಮ್ಮ ಹೃದಯಕ್ಕೆ ನಶೆ ಏರಿಸೋ ಮಹಿಳೆ ವಾಪಸ್ಸಾಗಿದ್ದಾಳೆ ಎಂದು ಕಮೆಂಟ್ ಹಾಕಿದ್ದಾರೆ.
ತನುಶ್ರೀ ದತ್ತಾ 2005ರಲ್ಲಿ ಆಶಿಕ್ ಬನಾಯಾ ಆಪ್ನೇ ಸಿನಿಮಾ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ್ದರು. ಈಕೆ ಕೊನೆಯದಾಗಿ ಅಪಾರ್ಟ್ಮೆಂಟ್ ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
https://www.instagram.com/p/CMR0hSoF–G/?utm_source=ig_web_copy_link