![](https://kannadadunia.com/wp-content/uploads/2020/07/9b4c1940-7fcb-4285-a4a2-2cff9ff87dcd.jpg)
ಕೊರೊನಾ ಸೋಂಕು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಸಾಮಾನ್ಯ ಜನರನ್ನು ಹಿಂಡಿಹಿಪ್ಪೆ ಮಾಡುತ್ತಿದೆ. ಜನ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ನಿತ್ಯ ಜೀವನ ಕಷ್ಟವಾಗುತ್ತಿದೆ. ಅಂಥದ್ದರಲ್ಲಿ ಕೆಲವರು ಅನಿವಾರ್ಯವಾಗಿ ವೃತ್ತಿಯನ್ನೇ ಬದಲಿಸಿದ್ದೂ ಇದೆ.
ತಮಿಳುನಾಡಿನಲ್ಲಿ ಚಲನಚಿತ್ರ ನಿರ್ದೇಶಕ ಆನಂದ್, ಕಿರಾಣಿ ಅಂಗಡಿ ತೆರೆದು ಸುದ್ದಿಯಾಗಿದ್ದಾರೆ. ಅವರು ಕಿರಾಣಿ ಅಂಗಡಿಯಲ್ಲಿ ಕುಳಿತು ಗ್ರಾಹಕರಿಗೆ ಸಾಮಗ್ರಿ ವಿತರಿಸುವ ಫೋಟೋಗಳು ವೈರಲ್ ಆಗಿದೆ. ಇದೇ ವೇಳೆ ಮಾಧ್ಯಮಗಳಿಗೂ ಪ್ರತಿಕ್ರಿಯೆ ನೀಡಿದ್ದು, ತಮ್ಮ ಕೆಲಸದ ಬಗ್ಗೆ ಹೆಮ್ಮೆ ಪಟ್ಟುಕೊಂಡಿದ್ದಾರೆ.
ಜೀವಾನೋಪಾಯ ಮಾಡಲು ನನಗೆ ಇದು ಅನಿವಾರ್ಯ ಎಂದು ಅವರು ಹೇಳಿದ್ದು, ಯಾವ ಕೆಲಸವೂ ಮೇಲು ಅಥವಾ ಕೀಳಲ್ಲ ಎಂದು ತಿಳಿಸಿದ್ದಾರೆ.