ತಮಿಳು ನಟ ಥವಸಿ ಕ್ಯಾನ್ಸರ್ನಿಂದ ಬಳಲುತ್ತಿದ್ದು ಮಧುರೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂಲಗಳ ಪ್ರಕಾರ ಈ ನಟ ಗಂಭೀರ ಸ್ಥಿತಿಯಲ್ಲಿದ್ದು ಚಿಕಿತ್ಸೆಗಾಗಿ ಆರ್ಥಿಕ ಸಹಾಯ ಕೋರಿದ್ದಾರೆ.
ಡಿಎಂಕೆ ಎಂಎಲ್ಎ ಡಾ. ಸರವಣ ಫೇಸ್ಬುಕ್ನಲ್ಲಿ ಈ ಬಗ್ಗೆ ಪೋಸ್ಟ್ ಶೇರ್ ಮಾಡಿದ್ದಾರೆ. ಸದ್ಯ ಈ ಕಲಾವಿದನ ಚಿಕಿತ್ಸೆಯನ್ನ ಸೂರ್ಯ ಚಾರಿಟೇಬಲ್ ಟ್ರಸ್ಟ್ ನೋಡಿಕೊಳ್ತಿದೆ. ಕಲಾವಿದನ ಕುಟುಂಬಕ್ಕೆ ಸಾರ್ವಜನಿಕರು ಆರ್ಥಿಕ ನೆರವು ನೀಡಿ ಅಂತಾ ಮನವಿ ಮಾಡಿದ್ದಾರೆ.
ಇನ್ನು ಆಸ್ಪತ್ರೆಗೆ ಭೇಟಿ ನೀಡಿ ಥವಸಿ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಶಾಸಕ, ತನ್ನ ಪ್ರತಿಭೆ ಮೂಲಕ ಜನರನ್ನ ರಂಜಿಸಿದ ನಟ ಈ ಪರಿಸ್ಥಿತಿಯಲ್ಲಿ ಇರೋದನ್ನ ನೋಡೋಕೆ ತುಂಬಾನೇ ಬೇಜಾರಾಗುತ್ತೆ ಅಂತಾ ಹೇಳಿದ್ರು.