![](https://kannadadunia.com/wp-content/uploads/2021/01/zug-police-jersusalema-dance-1024x569.jpg)
ಹಿಮದ ನಡುವೆ ಪೊಲೀಸ್ ಅಧಿಕಾರಿಗಳು ಮಾಡುತ್ತಿರುವ ನೃತ್ಯದ ವಿಡಿಯೋ ಫೇಸ್ಬುಕ್ನಲ್ಲಿ ಬರೋಬ್ಬರಿ 8 ಮಿಲಿಯನ್ ವೀವ್ಸ್ ಸಂಪಾದಿಸಿದೆ. ಪೊಲೀಸರ ಈ ನೃತ್ಯ ಕೇವಲ ಸ್ವಿಜರ್ಲೆಂಡ್ ಜನತೆಯನ್ನ ಮಾತ್ರವಲ್ಲದೇ ವಿಶ್ವದ ಮೂಲೆ ಮೂಲೆಯ ಜನರಿಂದ ಮೆಚ್ಚುಗೆ ಸಂಪಾದಿಸಿದೆ.
ಫೀಲ್ಡಿನಲ್ಲಿರುವ ಪೊಲೀಸರಿಂದ ಹಿಡಿದು ಕಂಟ್ರೋಲ್ ರೂಂವರೆಗೆ ಎಲ್ಲಾ ಸಿಬ್ಬಂದಿ ಆಫ್ರಿಕನ್ ಹಿಟ್ ಗೀತೇ ಜೆರುಸಲೆಮಾಗೆ ಕುಣಿದು ಕುಪ್ಪಳಿಸಿದ್ದಾರೆ. ಈ ಜೆರುಸಲೆಮಾ ಹಾಡನ್ನ ಸಂಗೀತ ನಿರ್ದೇಶಕ ಮಾಸ್ಟರ್ ಕೆಜಿ ಕಂಪೋಸ್ ಮಾಡಿದ್ದರೆ ನೊಮ್ಕೆಬೊ ಜಿಕೊಡೆ ಹಾಡಿದ್ದಾರೆ. ಒಮ್ಮೊಮ್ಮೆ ಜೀವನದಲ್ಲಿ ನಗುವನ್ನ ಭೇಟಿ ಮಾಡೋಕೆ ಬಹಳ ಕಷ್ಟ ಪಡಬೇಕಿಲ್ಲ. ಅದರಲ್ಲೂ ನಗಲು ಬಹಳ ಕಷ್ಟ ಎನಿಸುವ ಈ ಸಂದರ್ಭದಲ್ಲೂ ಹಾಗೂ ನಮ್ಮ ಮುಖದಲ್ಲಿ ನಗು ತರಿಸಲು ಕಷ್ಟವಾಗ್ತಿರುವ ಈ ಸಂದರ್ಭದಲ್ಲಿ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.
https://twitter.com/i/status/1350473725301424128
https://twitter.com/i/status/1350046139161186305
https://twitter.com/i/status/1350476542489583618