alex Certify ದೆಹಲಿ ಆಸ್ಪತ್ರೆಗೆ ಆಮ್ಲಜನಕ ಪೂರೈಸಿದ ಸುಶ್ಮಿತಾ ಸೇನ್​..! ಅದಕ್ಕೂ ಕ್ಯಾತೆ ತೆಗೆದವನಿಗೆ ನಟಿ ಟಾಂಗ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೆಹಲಿ ಆಸ್ಪತ್ರೆಗೆ ಆಮ್ಲಜನಕ ಪೂರೈಸಿದ ಸುಶ್ಮಿತಾ ಸೇನ್​..! ಅದಕ್ಕೂ ಕ್ಯಾತೆ ತೆಗೆದವನಿಗೆ ನಟಿ ಟಾಂಗ್​

ಬಾಲಿವುಡ್ ನಟಿ ಸುಶ್ಮಿತಾ ಸೇನ್​ ಕೃತಕ ಆಮ್ಲಜನಕ ಕೊರತೆ ಸಮಸ್ಯೆ ಅನುಭವಿಸುತ್ತಿದ್ದ ದೆಹಲಿಯ ಆಸ್ಪತ್ರೆಗೆ ಆಕ್ಸಿಜನ್​ ಸಿಲಿಂಡರ್​ ಪೂರೈಸುವಲ್ಲಿ ಯಶಸ್ವಿಯಾಗಿದ್ದರು. ಸುಶ್ಮಿತಾ ಸೇನ್​ ಈ ಕಾರ್ಯ ಮಾಡುತ್ತಿದ್ದಂತೆ ಟ್ವೀಟಿಗರೊಬ್ಬರು ಮುಂಬೈ ಆಸ್ಪತ್ರೆಗೆಗಳಿಗೆ ಸಹಾಯ ಮಾಡೋದು ಬಿಟ್ಟು ದೆಹಲಿ ಆಸ್ಪತ್ರೆಗೆ ಸಹಾಯ ಮಾಡಿದ್ದೇಕೆ ಎಂದು ಪ್ರಶ್ನೆ ಮಾಡಿದ್ದರು.

ಆಮ್ಲಜನಕ ಕೊರತೆ ಸುದ್ದಿಗೆ ಪ್ರತಿಕ್ರಿಯಿಸಿದ್ದ ನಟಿ ಸುಶ್ಮಿತಾ, ಇದು ನಿಜವಾಗಿಯೂ ಮನಸ್ಸಿಗೆ ನೋವಾಗುವಂತಹ ಮಾತಾಗಿದೆ. ಎಲ್ಲಾ ಕಡೆ ಆಮ್ಲಜನಕದ ಅಭಾವ ಇದೆ, ನಾನು ಈ ಆಸ್ಪತ್ರೆಗೆ ಕೆಲ ಆಮ್ಲಜನಕದ ಸಿಲಿಂಡರ್​ಗಳನ್ನ ತಲುಪಿಸುವಲ್ಲಿ ಯಶಸ್ವಿಯಾಗಿದ್ದೇನೆ. ಆದರೆ ಮುಂಬೈನಿಂದ ದೆಹಲಿಗೆ ಸಾಗಿಸಲು ನನ್ನ ಬಳಿ ಯಾವುದೇ ಮಾರ್ಗವಿಲ್ಲ. ದಯಮಾಡಿ ಒಂದು ಮಾರ್ಗವನ್ನ ಕಂಡುಕೊಳ್ಳಲು ನೀವೇ ಸಹಾಯ ಮಾಡಿ ಎಂದಿದ್ದಾರೆ.

ಸುಶ್ಮಿತಾರ ಈ ಪೋಸ್ಟ್​ಗೆ ಟ್ವೀಟಿಗರೊಬ್ಬರು ದೆಹಲಿಗೆ ಯಾಕೆ ಆಕ್ಸಿಜನ್​ ಪೂರೈಕೆ ಮಾಡಲು ನೆರವಾಗ್ತಿದೀರಾ ಎಂದು ಪ್ರಶ್ನೆ ಮಾಡಿದ್ದರು. ಟ್ವೀಟಿಗನ ಈ ಪ್ರಶ್ನೆಗೆ ಉತ್ತರಿಸಿದ ಸುಶ್ಮಿತಾ, ಏಕೆಂದರೆ ಮುಂಬೈನಲ್ಲಿ ಇನ್ನೂ ಕೃತಕ ಆಮ್ಲಜನಕಗಳ ವ್ಯವಸ್ಥೆ ಇದೆ. ಆದರೆ ದೆಹಲಿಯಲ್ಲಿ ಆಮ್ಲಜನಕ ಸಿಲಿಂಡರ್​ಗೆ ಕೊರತೆ ಇದೆ. ಅದರಲ್ಲೂ ಇಂತಹ ಸಣ್ಣ ಆಸ್ಪತ್ರೆಗಳಿಗೆ ಸಹಾಯದ ಅಗತ್ಯವಿದೆ. ಸಾಧ್ಯವಾದರೆ ನೀವೂ ಸಹಾಯ ಮಾಡಿ ಎಂದು ಬರೆದಿದ್ದಾರೆ.

ಇದಾದ ಬಳಿಕ ಮತ್ತೊಂದು ಟ್ವೀಟ್​ ಪೋಸ್ಟ್ ಮಾಡಿದ ಸುಶ್ಮಿತಾ ಸೇನ್, ಆಸ್ಪತ್ರೆಯಲ್ಲಿ ಆಮ್ಲಜನಕದ ವ್ಯವಸ್ಥೆಯಾಗಿದೆ. ಜಾಗೃತಿ ಹಾಗೂ ಬೆಂಬಲ ಸೂಚಿಸಿದ ಪ್ರತಿಯೊಬ್ಬರಿಗೂ ಧನ್ಯವಾದ, ಎಂದಿಗೂ ಒಳ್ಳೆಯ ಮನಸ್ಸಿನಿಂದಿರಿ, ಇದು ನಿಮಗೆ ಸೂಕ್ತ ಎನಿಸುತ್ತೆ ಎಂದು ಬರೆದಿದ್ದಾರೆ.

— sushmita sen (@thesushmitasen) April 22, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...