
ಆಮ್ಲಜನಕ ಕೊರತೆ ಸುದ್ದಿಗೆ ಪ್ರತಿಕ್ರಿಯಿಸಿದ್ದ ನಟಿ ಸುಶ್ಮಿತಾ, ಇದು ನಿಜವಾಗಿಯೂ ಮನಸ್ಸಿಗೆ ನೋವಾಗುವಂತಹ ಮಾತಾಗಿದೆ. ಎಲ್ಲಾ ಕಡೆ ಆಮ್ಲಜನಕದ ಅಭಾವ ಇದೆ, ನಾನು ಈ ಆಸ್ಪತ್ರೆಗೆ ಕೆಲ ಆಮ್ಲಜನಕದ ಸಿಲಿಂಡರ್ಗಳನ್ನ ತಲುಪಿಸುವಲ್ಲಿ ಯಶಸ್ವಿಯಾಗಿದ್ದೇನೆ. ಆದರೆ ಮುಂಬೈನಿಂದ ದೆಹಲಿಗೆ ಸಾಗಿಸಲು ನನ್ನ ಬಳಿ ಯಾವುದೇ ಮಾರ್ಗವಿಲ್ಲ. ದಯಮಾಡಿ ಒಂದು ಮಾರ್ಗವನ್ನ ಕಂಡುಕೊಳ್ಳಲು ನೀವೇ ಸಹಾಯ ಮಾಡಿ ಎಂದಿದ್ದಾರೆ.
ಸುಶ್ಮಿತಾರ ಈ ಪೋಸ್ಟ್ಗೆ ಟ್ವೀಟಿಗರೊಬ್ಬರು ದೆಹಲಿಗೆ ಯಾಕೆ ಆಕ್ಸಿಜನ್ ಪೂರೈಕೆ ಮಾಡಲು ನೆರವಾಗ್ತಿದೀರಾ ಎಂದು ಪ್ರಶ್ನೆ ಮಾಡಿದ್ದರು. ಟ್ವೀಟಿಗನ ಈ ಪ್ರಶ್ನೆಗೆ ಉತ್ತರಿಸಿದ ಸುಶ್ಮಿತಾ, ಏಕೆಂದರೆ ಮುಂಬೈನಲ್ಲಿ ಇನ್ನೂ ಕೃತಕ ಆಮ್ಲಜನಕಗಳ ವ್ಯವಸ್ಥೆ ಇದೆ. ಆದರೆ ದೆಹಲಿಯಲ್ಲಿ ಆಮ್ಲಜನಕ ಸಿಲಿಂಡರ್ಗೆ ಕೊರತೆ ಇದೆ. ಅದರಲ್ಲೂ ಇಂತಹ ಸಣ್ಣ ಆಸ್ಪತ್ರೆಗಳಿಗೆ ಸಹಾಯದ ಅಗತ್ಯವಿದೆ. ಸಾಧ್ಯವಾದರೆ ನೀವೂ ಸಹಾಯ ಮಾಡಿ ಎಂದು ಬರೆದಿದ್ದಾರೆ.
ಇದಾದ ಬಳಿಕ ಮತ್ತೊಂದು ಟ್ವೀಟ್ ಪೋಸ್ಟ್ ಮಾಡಿದ ಸುಶ್ಮಿತಾ ಸೇನ್, ಆಸ್ಪತ್ರೆಯಲ್ಲಿ ಆಮ್ಲಜನಕದ ವ್ಯವಸ್ಥೆಯಾಗಿದೆ. ಜಾಗೃತಿ ಹಾಗೂ ಬೆಂಬಲ ಸೂಚಿಸಿದ ಪ್ರತಿಯೊಬ್ಬರಿಗೂ ಧನ್ಯವಾದ, ಎಂದಿಗೂ ಒಳ್ಳೆಯ ಮನಸ್ಸಿನಿಂದಿರಿ, ಇದು ನಿಮಗೆ ಸೂಕ್ತ ಎನಿಸುತ್ತೆ ಎಂದು ಬರೆದಿದ್ದಾರೆ.