
’ದಿಲ್ ಬೇಚಾರಾ’ ಕೇವಲ ಮತ್ತೊಂದು ಚಿತ್ರವಾಗಿರದೇ, ಅಭಿಮಾನಿಗಳಿಗೆ ಒಂದು ವಿಶೇಷ ಎಮೋಷನ್ ಆಗಿಬಿಟ್ಟಿದೆ. ಚಿತ್ರದಲ್ಲಿ ಸುಶಾಂತ್ ನಟಿಸಿರುವ ಮನ್ನಿ ಪಾತ್ರಧಾರಿ ತಾನು ರಜನಿಕಾಂತ್ ಥರ ಆಗಬೇಕು ಎಂದು ಹೇಳಿರುವುದು ತಲೈವಾ ಫ್ಯಾನ್ಸ್‌ಗೆ ಬಹಳ ಖುಷಿ ಕೊಟ್ಟಿದೆ.
ಇದೀಗ ರಜನಿ ಅಭಿಮಾನಿಗಳು ಸುಶಾಂತ್ ನೆನಪಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಕೋರಿ ಸಾಮಾಜಿಕ ಜಾಲತಾಣಗಳಲ್ಲಿ ಮೆಮೆಗಳು ಹಾಗೂ ಸಂದೇಶಗಳನ್ನು ಹರಿಯಬಿಟ್ಟಿದ್ದಾರೆ.