alex Certify ಬಿಂಗೋ ಕಂಪನಿ ವಿರುದ್ಧ ಸುಶಾಂತ್ ಫ್ಯಾನ್ಸ್ ಗರಂ..! ಕಾರಣವೇನು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಂಗೋ ಕಂಪನಿ ವಿರುದ್ಧ ಸುಶಾಂತ್ ಫ್ಯಾನ್ಸ್ ಗರಂ..! ಕಾರಣವೇನು ಗೊತ್ತಾ..?

ಕೆಲ ತಿಂಗಳ ಹಿಂದಷ್ಟೇ ನಿಧನರಾದ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಎಷ್ಟೊಂದು ಆಸಕ್ತಿ ಹೊಂದಿದ್ದರು ಎನ್ನೋದು ಎಲ್ಲರಿಗೂ ತಿಳಿದ ವಿಷಯ.

ಚಂದ್ರನ ಅಂಗಳದಲ್ಲೊಂದು ಜಾಗ ಖರೀದಿ ಮಾಡಬೇಕು ಅಂತಿದ್ದ ನಟ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಪ್ರಕರಣದಿಂದಾಗಿ ಅನೇಕ ನಟ – ನಟಿಯರಿಗೆ ಸಂಕಷ್ಟ ಬಂದ ಬೆನ್ನಲ್ಲೇ ಇದೀಗ ಬಿಂಗೋ ಕಂಪನಿ ಕೂಡ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಬಿಂಗೋ ಕಂಪನಿಯ ಈ ಜಾಹಿರಾತಿನಲ್ಲಿ ಬಾಲಿವುಡ್​ ನಟ ರಣವೀರ್​ ಸಿಂಗ್​ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ರಣವೀರ್​ ಸಿಂಗ್​​ ಪ್ಯಾರಾಡಾಕ್ಸಿಕಲ್​ ಫೋಟೋನ್ಸ್, ಆಲ್ಗೋರಿದಮ್ಸ್ ಹಾಗೂ ಎಲಿಯನ್ಸ್ ಬಗ್ಗೆ ಮಾತನಾಡಿದ್ದಾರೆ.

ಇದನ್ನ ನೋಡಿದ ಸುಶಾಂತ್​ ಅಭಿಮಾನಿಗಳು ರಣವೀರ್,​​ ಸುಶಾಂತ್​ರನ್ನ ಕಾಪಿ ಮಾಡಿದ್ದಾರೆ ಅಂತಾ ಹೇಳಿದ್ರೆ, ಇನ್ನೂ ಕೆಲವರಂತೂ ಸುಶಾಂತ್​ರ ಅಭಿಮಾನಿಗಳ ಸಂಖ್ಯೆ ನೋಡಿ ರಣವೀರ್​ಗೆ ಹೊಟ್ಟೆಕಿಚ್ಚಾಗಿದೆ ಅಂತಾ ಕಮೆಂಟ್​ ಮಾಡ್ತಿದ್ದಾರೆ. ಹಾಗೂ ಟ್ವಿಟರ್​​ನಲ್ಲಿ ಬಾಯ್ಕಾಟ್​ ಬಿಂಗೋ ಅಭಿಯಾನವನ್ನೂ ಶುರು ಮಾಡಿದ್ದಾರೆ. ಸುಶಾಂತ್​ ಅಭಿಮಾನಿಗಳ ವಿರೋಧ ತಡೆಯಲಾಗದ ಬಿಂಗೋ ಕಂಪನಿ ಯೂಟ್ಯೂಬ್​ನಲ್ಲಿ ಲೈಕ್​ ಡಿಸ್​ಲೈಕ್​ ಬಟನ್​​ನ್ನೇ ಬಂದ್​ ಮಾಡಿದೆ.

— Ҡıʀaռ ? (SSRF) ||1D-MUTUALS CHECK PINNED TWEET ? (@zayniesgal) November 18, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...