
ಚಂದ್ರನ ಅಂಗಳದಲ್ಲೊಂದು ಜಾಗ ಖರೀದಿ ಮಾಡಬೇಕು ಅಂತಿದ್ದ ನಟ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಿಂದಾಗಿ ಅನೇಕ ನಟ – ನಟಿಯರಿಗೆ ಸಂಕಷ್ಟ ಬಂದ ಬೆನ್ನಲ್ಲೇ ಇದೀಗ ಬಿಂಗೋ ಕಂಪನಿ ಕೂಡ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಬಿಂಗೋ ಕಂಪನಿಯ ಈ ಜಾಹಿರಾತಿನಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ರಣವೀರ್ ಸಿಂಗ್ ಪ್ಯಾರಾಡಾಕ್ಸಿಕಲ್ ಫೋಟೋನ್ಸ್, ಆಲ್ಗೋರಿದಮ್ಸ್ ಹಾಗೂ ಎಲಿಯನ್ಸ್ ಬಗ್ಗೆ ಮಾತನಾಡಿದ್ದಾರೆ.
ಇದನ್ನ ನೋಡಿದ ಸುಶಾಂತ್ ಅಭಿಮಾನಿಗಳು ರಣವೀರ್, ಸುಶಾಂತ್ರನ್ನ ಕಾಪಿ ಮಾಡಿದ್ದಾರೆ ಅಂತಾ ಹೇಳಿದ್ರೆ, ಇನ್ನೂ ಕೆಲವರಂತೂ ಸುಶಾಂತ್ರ ಅಭಿಮಾನಿಗಳ ಸಂಖ್ಯೆ ನೋಡಿ ರಣವೀರ್ಗೆ ಹೊಟ್ಟೆಕಿಚ್ಚಾಗಿದೆ ಅಂತಾ ಕಮೆಂಟ್ ಮಾಡ್ತಿದ್ದಾರೆ. ಹಾಗೂ ಟ್ವಿಟರ್ನಲ್ಲಿ ಬಾಯ್ಕಾಟ್ ಬಿಂಗೋ ಅಭಿಯಾನವನ್ನೂ ಶುರು ಮಾಡಿದ್ದಾರೆ. ಸುಶಾಂತ್ ಅಭಿಮಾನಿಗಳ ವಿರೋಧ ತಡೆಯಲಾಗದ ಬಿಂಗೋ ಕಂಪನಿ ಯೂಟ್ಯೂಬ್ನಲ್ಲಿ ಲೈಕ್ ಡಿಸ್ಲೈಕ್ ಬಟನ್ನ್ನೇ ಬಂದ್ ಮಾಡಿದೆ.