ಫ್ಯಾಮಿಲಿ ಮ್ಯಾನ್ ವೆಬ್ ಸರಣಿಯ ಮೂಲಕ ನಟ ಮನೋಜ್ ಬಾಜಪೇಯಿ ಮನೆಮಾತಾಗಿದ್ದಾರೆ. ಆದರೆ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಕಾಮಿಡಿಯನ್ ಸುನೀಲ್ ಪಾಲ್ ಮನೋಜ್ ಬಾಜಪೇಯಿ ಓರ್ವ ಕೆಟ್ಟ ವರ್ತನೆಯುಳ್ಳ ವ್ಯಕ್ತಿ ಎಂದು ಜರಿದಿದ್ದಾರೆ. ಅಲ್ಲದೇ ಅಮೆಜಾನ್ ಪ್ರೈಮ್ನಲ್ಲಿ ರಿಲೀಸ್ ಆದ ಈ ವೆಬ್ ಸರಣಿಯು ಪೋರ್ನ್ ವಿಡಿಯೋ ಜೊತೆ ಸಂಬಂಧ ಹೊಂದಿದೆ ಎಂದು ಆರೋಪ ಮಾಡಿದ್ದಾರೆ.
ರಾಜ್ ಕುಂದ್ರಾ ವಿರುದ್ಧದ ಪ್ರಕರಣದ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿದ ಸುನೀಲ್ ಪಾಲ್, ಡಿಜಿಟಲ್ ಮಾಧ್ಯಮಗಳಲ್ಲಿ ಯಾವುದೇ ಸೆನ್ಸಾರ್ ಅಡೆತಡೆ ಇಲ್ಲದ ಕಾರಣ ಅನೇಕರು ಇದರ ಲಾಭ ಪಡೆಯುತ್ತಿದ್ದಾರೆ. ಇದರಿಂದಾಗಿ ಮನೆಯಲ್ಲಿ ಕುಟುಂಬಸ್ಥರು ಒಟ್ಟಾಗಿ ಕೂತು ನೋಡಲಾಗದಂತಹ ವೆಬ್ ಸಿರೀಸ್ಗಳು ಬರುತ್ತಿವೆ ಎಂದು ಹೇಳಿದ್ರು.
ಮನೋಜ್ ಬಾಜಪೇಯಿಯಂತವರನ್ನ ನಾನು ದ್ವೇಷಿಸುತ್ತೇನೆ. ಮನೋಜ್ ಒಬ್ಬ ದೊಡ್ಡ ನಟ ಇದ್ದಿರಬಹುದು. ದೊಡ್ಡ ದೊಡ್ಡ ಪ್ರಶಸ್ತಿಗಳೂ ಸಿಕ್ಕಿರಬಹುದು. ಆದರೆ ಅವರಷ್ಟು ದುರ್ವರ್ತನೆ ಹಾಗೂ ನೀಚ ವ್ಯಕ್ತಿಯನ್ನು ನಾನೆಲ್ಲೂ ನೋಡೇ ಇಲ್ಲ ಎಂದು ಜರಿದಿದ್ದಾರೆ.
ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಚಾನುಗೆ ಬಂಪರ್, ಪೊಲೀಸ್ ಅಧಿಕಾರಿ ಹುದ್ದೆ ನೀಡಿದ ಮಣಿಪುರ ಸರ್ಕಾರ
ಜನರು ನಿನಗೆ ರಾಷ್ಟ್ರಪತಿ ಪ್ರಶಸ್ತಿ ನೀಡ್ತಿದ್ದಾರೆ. ನೀನು ಫ್ಯಾಮಿಲಿ ಮ್ಯಾನ್ ಪ್ರೇಕ್ಷಕರಿಗಾಗಿ ನಿರ್ಮಾಣ ಮಾಡಿದ್ದೇನೆ ಎಂದು ಹೇಳುತ್ತಿದ್ದೀಯಾ. ಪತ್ನಿಗೆ ಯಾರದ್ದೂ ಜೊತೆ ಅಕ್ರಮ ಸಂಬಂಧ, ನಿನಗೆ ಇನ್ನೆಲ್ಲೋ ಅಕ್ರಮ ಸಂಬಂಧ, ಅಪ್ರಾಪ್ತ ಮಗಳು ಬಾಯ್ಫ್ರೆಂಡ್ ಬಗ್ಗೆ ಮಾತನಾಡುತ್ತಾಳೆ ಹಾಗೂ ಚಿಕ್ಕ ಹುಡುಗ ಅವನ ವಯಸ್ಸಿಗೂ ಮೀರಿ ವರ್ತಿಸುತ್ತಾನೆ. ಇದನ್ನೇ ನೀನು ಫ್ಯಾಮಿಲಿ ಮ್ಯಾನ್ ಮೂಲಕ ಜನರಿಗೆ ಹೇಳ ಹೊರಟಿರೋದು..? ಇಂತಹದ್ದಕ್ಕೆ ಕುಟುಂಬ ಎಂದು ಕರೆಯಲಾಗುತ್ತಾ..? ಎಂದು ಆಕ್ರೋಶ ಹೊರಹಾಕಿದ್ದಾರೆ.
ಫ್ಯಾಮಿಲಿ ಮ್ಯಾನ್ ಮಾತ್ರವಲ್ಲದೇ ಮಿರ್ಝಾಪುರ ವೆಬ್ ಸರಣಿ ವಿರುದ್ಧವೂ ಆಕ್ರೋಶ ಹೊರಹಾಕಿದ ಸುನೀಲ್, ಆ ಮಿರ್ಜಾಪುರ ವೆಬ್ ಸರಣಿಯಲ್ಲಂತೂ ಅದೆಷ್ಟು ಅಧಿಕ ಪ್ರಸಂಗಿ ಎನಿಸುವಂತಹ ಪಾತ್ರಗಳಿವೆ..? ಇವೆಲ್ಲವೂ ಬಂದ್ ಆಗಬೇಕು. ಇವು ಕೂಡ ಪೋರ್ನ್ ವಿಡಿಯೋಗೆ ಸಮವಾಗಿದೆ. ಪೋರ್ನ್ ಕೇವಲ ದೃಶ್ಯ ಮಾತ್ರವಲ್ಲ. ವಿಚಾರ ಕೂಡ ಆಗಿದೆ ಎಂದು ಹೇಳಿದ್ದಾರೆ.