alex Certify ಸ್ಯಾಂಡಲ್ವುಡ್ ನಲ್ಲಿ ಹೊಸ ಅಲೆ ಮೂಡಿಸಿದ ‘ಕೋಟಿಗೊಬ್ಬ 3’, ‘ಸಲಗ’: ಅಭಿಮಾನಿಗಳಲ್ಲಿ ಇಮ್ಮಡಿಸಿದ ಹಬ್ಬದ ಸಂಭ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಯಾಂಡಲ್ವುಡ್ ನಲ್ಲಿ ಹೊಸ ಅಲೆ ಮೂಡಿಸಿದ ‘ಕೋಟಿಗೊಬ್ಬ 3’, ‘ಸಲಗ’: ಅಭಿಮಾನಿಗಳಲ್ಲಿ ಇಮ್ಮಡಿಸಿದ ಹಬ್ಬದ ಸಂಭ್ರಮ

ಚಿತ್ರಮಂದಿರಗಳಲ್ಲಿ ಶೇಕಡ 100 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಿದ ನಂತರ ದಸರಾ ಹಬ್ಬದ ಕೊಡುಗೆಯಾಗಿ ಇಂದು ಎರಡು ಬಿಗ್ ಬಜೆಟ್ ಚಿತ್ರಗಳು ಬಿಡುಗಡೆಯಾಗ್ತಿವೆ.

ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಮತ್ತು ದುನಿಯಾ ವಿಜಯ್ ಅಭಿನಯದ ‘ಸಲಗ’ ಸ್ಯಾಂಡಲ್ವುಡ್ ನಲ್ಲಿ ಸಂಭ್ರಮ ಹೆಚ್ಚಿಸಿವೆ. ಸ್ಟಾರ್ ನಟರ ಎರಡು ಬಿಗ್ ಬಜೆಟ್ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಲ್ಲಿ ದಸರಾ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

ಕೊರೋನಾ ಕಾರಣದಿಂದಾಗಿ ಸಂಕಷ್ಟದಲ್ಲಿದ್ದ ಚಿತ್ರರಂಗದಲ್ಲಿ ಹೊಸ ಅಲೆ ಮೂಡಿದೆ. ಚಿತ್ರಮಂದಿರಗಳ ಬಳಿ ಜನಜಾತ್ರೆಯೇ ನೆರೆದಿದ್ದು, ನೆಚ್ಚಿನ ನಟರ ಸಿನಿಮಾ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸಂಭ್ರಮದಿಂದ ಕಾಯುತ್ತಿದ್ದಾರೆ. ಪೋಸ್ಟರ್ ಗಳಿಗೆ ಹಾಲಿನ ಅಭಿಷೇಕ, ಹೂವಿನ ಹಾರ ಹಾಕಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

‘ಕೋಟಿಗೊಬ್ಬ 3’ ಫ್ಯಾನ್ಸ್ ಶೋ ಎಲ್ಲಿಯೂ ಹಾಕಿಲ್ಲ. ಬೆಳಗ್ಗೆ 10 ಗಂಟೆಗೆ ರಾಜ್ಯಾದ್ಯಂತ ಪ್ರದರ್ಶನ ಆರಂಭವಾಗಲಿವೆ ಎಂದು ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...