alex Certify BIG NEWS: ‘ಬಿಗ್ ಬಾಸ್’ ವಾರದ ಕಥೆಗೆ ಹೊಸ ನಿರೂಪಕ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‘ಬಿಗ್ ಬಾಸ್’ ವಾರದ ಕಥೆಗೆ ಹೊಸ ನಿರೂಪಕ..?

 ಬೆಂಗಳೂರು: ಖ್ಯಾತ ನಟ ಹಾಗೂ ‘ಬಿಗ್ ಬಾಸ್’ ನಿರೂಪಕ ಕಿಚ್ಚ ಸುದೀಪ್ ಅವರಿಗೆ ಅನಾರೋಗ್ಯದ ಕಾರಣ ಈ ವಾರ ‘ಬಿಗ್ ಬಾಸ್’ ವಾರದ ಕಥೆ ನಡೆಸಿಕೊಡಲು ಬೇರೆ ನಿರೂಪಕರು ಬರಲಿದ್ದಾರೆ ಎಂದು ಹೇಳಲಾಗಿದೆ.

8 ಸೀಸನ್ ಗಳಲ್ಲಿ ಸುದೀಪ್ ಅವರೇ ಹೋಸ್ಟ್ ಮಾಡಿದ್ದಾರೆ. ಎಂಟನೇ ಸೀಸನ್ ಏಳನೇ ವಾರಕ್ಕೆ ಕಾಲಿಟ್ಟಿದೆ. ವಾರದ ಕಥೆ ಕಿಚ್ಚನ ಜೊತೆ, ಸೂಪರ್ ಸಂಡೆ ವಿತ್ ಸುದೀಪ ಕಾರ್ಯಕ್ರಮಗಳನ್ನು ಸುದೀಪ್ ಅವರು ನಡೆಸಿಕೊಡುತ್ತಿದ್ದಾರೆ. ಈ ವಾರ ಸುದೀಪ್ ಅನಾರೋಗ್ಯದ ಕಾರಣ ಬೇರೆ ನಿರೂಪಕರನ್ನು ಕರೆಸುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.

ಇಲ್ಲವಾದರೆ, ಈ ವಾರ ಸ್ಪರ್ಧಿಗಳಿಗೆ ಹೆಚ್ಚಿನ ಚಟುವಟಿಕೆಗಳಿಗೆ ಅವಕಾಶ ನೀಡಿ, ಮುಂದಿನ ವಾರ ಇಬ್ಬರನ್ನು ಎಲಿಮಿನೇಟ್ ಮಾಡಬಹುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...