
ವಿರಾಟ್ ಕೊಹ್ಲಿ ಹಾಗೂ ಅನುಶ್ಕಾ ಶರ್ಮಾ ಬಾಲ್ಕನಿಯಲ್ಲಿ ಕುಳಿತಿದ್ದ ದೃಶ್ಯವನ್ನ ಮೀಡಿಯಾ ಹೌಸ್ನಲ್ಲಿ ಕೆಲಸ ಮಾಡುವ ಕ್ಯಾಮರಾಮ್ಯಾನ್ ಒಬ್ಬರು ಸೆರೆ ಹಿಡಿದಿದ್ದರು. ಈ ಫೋಟೋ ವೈರಲ್ ಆದ ಬಳಿಕ ಇನ್ಸ್ಟಾಗ್ರಾಂನಲ್ಲಿ ಆಕ್ರೋಶ ಹೊರ ಹಾಕಿರುವ ನಟಿ ಇಂತಹ ಕೆಲಸವನ್ನ ಈ ಕೂಡಲೇ ನಿಲ್ಲಿಸಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಸಾಕಷ್ಟು ಬಾರಿ ಮನವಿ ಮಾಡಿದ ಬಳಿಕವೂ ನಮ್ಮ ಖಾಸಗಿ ಜೀವನಕ್ಕೆ ಭಂಗ ತರುತ್ತಲೇ ಇದ್ದೀರಿ. ಈ ಕೆಲಸವನ್ನ ಈ ಕೂಡಲೇ ನಿಲ್ಲಿಸಿ ಅಂತಾ ಬರೆದುಕೊಂಡಿದ್ದಾರೆ.
ಕಳೆದ ವರ್ಷದ ಅಗಸ್ಟ್ನಲ್ಲಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿರೋದ್ರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ರು. ಈ ತಿಂಗಳಲ್ಲೇ ವಿರುಷ್ಕಾ ದಂಪತಿಗೆ ಮೊದಲ ಮಗುವಿನ ಜನನವಾಗಲಿದೆ.